ಪಾಕಿಸ್ತಾನ ಜಗತ್ತಿಗೇ ಕ್ಯಾನ್ಸರ್ ಹೇಳಿಕೆ: ಎಂಕ್ಯೂಎಂ ಪಕ್ಷದ ಮುಖ್ಯಸ್ಥನ ಬಂಧನಕ್ಕೆ ಅಮೆರಿಕ ಟೀಕೆ

ಪಾಕಿಸ್ತಾನವನ್ನು ಭಯೋತ್ಪಾದನೆಯ ಕೇಂದ್ರ, ಜಗತ್ತಿಗೇ ಕ್ಯಾನ್ಸರ್ ಎಂದಿದ್ದ ಪಾಕಿಸ್ತಾನದ ಎಂಕ್ಯೂಎಂ ಪಕ್ಷದ ಮುಖಂಡ ಅಲ್ತಾಫ್ ಹುಸೇನ್ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಅಮೆರಿಕ ಟೀಕಿಸಿದೆ.
ಪಾಕಿಸ್ತಾನದ ಎಂಕ್ಯೂಎಂ ಪಕ್ಷದ ಮುಖಂಡ ಅಲ್ತಾಫ್ ಹುಸೇನ್
ಪಾಕಿಸ್ತಾನದ ಎಂಕ್ಯೂಎಂ ಪಕ್ಷದ ಮುಖಂಡ ಅಲ್ತಾಫ್ ಹುಸೇನ್

ವಾಷಿಂಗ್ ಟನ್: ಪಾಕಿಸ್ತಾನವನ್ನು ಭಯೋತ್ಪಾದನೆಯ ಕೇಂದ್ರ, ಜಗತ್ತಿಗೇ ಕ್ಯಾನ್ಸರ್ ಎಂದಿದ್ದ ಪಾಕಿಸ್ತಾನದ ಎಂಕ್ಯೂಎಂ ಪಕ್ಷದ ಮುಖಂಡ ಅಲ್ತಾಫ್ ಹುಸೇನ್ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಅಮೆರಿಕ ಟೀಕಿಸಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಮರ್ಶಾತ್ಮಕ ಅಭಿಪ್ರಾಯವನ್ನು ಸ್ವಾಗತಿಸಬೇಕೇ ಹೊರತು ಅಂತಹ ಧ್ವನಿಗಳನ್ನು ಅಡಗಿಸಬಾರದು ಎಂದು ಅಮೆರಿಕ ಅಭಿಪ್ರಾಯಪಟ್ಟಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಶಾಂತಿಯಿಂದ ಆಲಿಸಬೇಕು ಎಂದು ಅಮೆರಿಕದ ಸಹ ವಕ್ತಾರ ಮಾರ್ಕ್ ಟೋನರ್ ಹೇಳಿದ್ದಾರೆ.

ಪಾಕಿಸ್ತಾನವನ್ನು ಜಗತ್ತಿಗೇ ಕ್ಯಾನ್ಸರ್ ಎಂದಿದ್ದ ಎಂಕ್ಯೂಎಂ ನ ಮುಖಂಡ ಅಲ್ತಾಫ್ ಹುಸೇನ್ ನನ್ನ ಬಂಧಿಸಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಮಾರ್ಕ್ ಟೋನರ್, ಯಾವುದೇ ರಾಜಕೀಯ ಪಕ್ಷದ ನಾಯಕ ಬಂಧನಕ್ಕೊಳಗಾದರೂ ಅಮೆರಿಕ  ಆ ಬಗ್ಗೆ ಕಾಳಜಿ ವಹಿಸುತ್ತದೆ ಎಂದು ಹೇಳಿದ್ದಾರೆ. ಸಾರ್ವಜನಿಕ ಸಭೆಯೊಂದರಲ್ಲಿ ಭಾಗವಹಿಸಿ ಮಾತನಾಡಿದ್ದ ಎಂಕ್ಯೂಎಂ ನ ಮುಖ್ಯಸ್ಥರಾಗಿರುವ ಅಲ್ತಾಫ್ ಹುಸೇನ್, ಪಾಕಿಸ್ತಾನ ಇಡೀ ಜಗತ್ತಿಗೆ ಕ್ಯಾನ್ಸರ್ ಇದ್ದಂತೆ, ಭಯೋತ್ಪಾದನೆಯ ಕೇಂದ್ರ. ಪಾಕಿಸ್ತಾನ ದೀರ್ಘಕಾಲ ಬಾಳಲಿ ಎಂದು ಯಾರು ಹೇಳುತ್ತಾರೆ ಎಂದು ಹೇಳಿದ್ದರು. ಈ ಹೇಳಿಕೆ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com