ಕಾಶ್ಮೀರ ಗಲಭೆ ಕುರಿತು ಮಾತುಕತೆಗೆ ಶೀಘ್ರವೇ ಸರ್ವಪಕ್ಷ ನಿಯೋಗ: ಗೃಹ ರಾಜನಾಥ್ ಸಿಂಗ್

ಕಾಶ್ಮೀರ ಗಲಭೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲು ಶೀಘ್ರವೇ ಜಮ್ಮು-ಕಾಶ್ಮಿರಕ್ಕೆ ಸರ್ವಪಕ್ಷ ನಿಯೋಗ ಬರಲಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಕಾಶ್ಮೀರ ಗಲಭೆ ಕುರಿತು ಮಾತುಕತೆಗೆ ಶೀಘ್ರವೇ ಸರ್ವಪಕ್ಷ ನಿಯೋಗ: ಗೃಹ ರಾಜನಾಥ್ ಸಿಂಗ್
ಕಾಶ್ಮೀರ ಗಲಭೆ ಕುರಿತು ಮಾತುಕತೆಗೆ ಶೀಘ್ರವೇ ಸರ್ವಪಕ್ಷ ನಿಯೋಗ: ಗೃಹ ರಾಜನಾಥ್ ಸಿಂಗ್

ಶ್ರೀನಗರ: ಕಾಶ್ಮೀರ ಗಲಭೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲು ಶೀಘ್ರವೇ ಜಮ್ಮು-ಕಾಶ್ಮಿರಕ್ಕೆ ಸರ್ವಪಕ್ಷ ನಿಯೋಗ ಬರಲಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಕಣಿವೆ ರಾಜ್ಯದಲ್ಲಿ ಗಲಭೆ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಭೇಟಿ ನೀಡಿರುವ ರಾಜನಾಥ್ ಸಿಂಗ್, ಶೀಘ್ರವೇ ಕಾಶ್ಮೀರದ ವಿಷಯದ ಬಗ್ಗೆ ಮಾತನಾಡಲು ಸರ್ವಪಕ್ಷ ನಿಯೋಗ ಬರಲಿದೆ ಎಂದು ಹೇಳಿದ್ದಾರೆ.  ಫೆಲ್ಟ್ ಗ್ಯಾನ್ ಗಾಲ ಬಗ್ಗೆಯೂ ಮಾತನಾಡಿರುವ ರಾಜನಾಥ್ ಸಿಂಗ್ ಪೆಲೆಟ್ ಗನ್ ಗಳ ಬಗ್ಗೆ ಸರ್ಕಾರ ಕೆಲವೇ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ. ಕಳೆದ 6 ವರ್ಷಗಳಲ್ಲೇ ಮೊದಲ ಬಾರಿಗೆ ಕಾಶ್ಮೀರದಲ್ಲಿ ಅತಿ ಹೆಚ್ಚಿನ ಗಲಭೆ ಸಂಭವಿಸಿದ್ದು ಕನಿಷ್ಠ 67 ಜನರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದು ತಿಂಗಳಲ್ಲಿ ಎರಡನೇ ಬಾರಿ ಗೃಹ ಸಚಿವ ರಾಜನಾಥ್ ಸಿಂಗ್ ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com