ತಾಳ್ಮೆ ಕಳೆದುಕೊಂಡು ಪತ್ರಿಕಾಗೋಷ್ಠಿಯಿಂದ ಹೊರನಡೆದ ಮೆಹಬೂಬಾ ಮುಫ್ತಿ

ಪತ್ರಕರ್ತರ ಪ್ರಶ್ನೆಗೆ ಗರಂ ಆದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ತಾಳ್ಮೆ ಕಳೆದುಕೊಂಡು ಅರ್ಧದರಲ್ಲಿಯೇ ಪತ್ರಿಕಾಗೋಷ್ಠಿಯನ್ನು ಮೊಟಕುಗೊಳಿಸಿ...
ಶ್ರೀನಗರದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ
ಶ್ರೀನಗರದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ

ಶ್ರೀನಗರ: ಪತ್ರಕರ್ತರ ಪ್ರಶ್ನೆಗೆ ಗರಂ ಆದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ತಾಳ್ಮೆ ಕಳೆದುಕೊಂಡು ಅರ್ಧದರಲ್ಲಿಯೇ ಪತ್ರಿಕಾಗೋಷ್ಠಿಯನ್ನು ಮೊಟಕುಗೊಳಿಸಿ ಹೊರನಡೆದಿರುವ ಘಟನೆ ಗುರುವಾರ ನಡೆದಿದೆ.

ಕಾಶ್ಮೀರ ಹಿಂಸಾಚಾರ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ರಾಜನಾಥ್ ಸಿಂಗ್ ಅವರು ಶ್ರೀನಗರಕ್ಕೆ ಭೇಟಿ ನೀಡಿದ್ದಾರೆ. ಇದರಂತೆ ರಾಜನಾಥ್ ಸಿಂಗ್ ಮತ್ತು ಮೆಹಬೂಬಾ ಮುಫ್ತಿಯವರು ಇಂದು ಜಂಟಿ ಪತ್ರಿಕಾಗೋಷ್ಟಿಯೊಂದನ್ನು ನಡೆಸಿದ್ದರು.

ಪತ್ರಿಕಾಗೋಷ್ಟಿ ಆರಂಭವಾದ ನಂತರ ಮೊದಲು ಮಾತನಾಡಿದ್ದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು, ಕಾಶ್ಮೀರದಲ್ಲಿ  ಹಿಂಸಾಚಾರ ಹಾಗೂ ಗಲಭೆ ನಿಯಂತ್ರಣಕ್ಕಾಗಿ ಕಾಶ್ಮೀರದಲ್ಲಿ ಭಾರತೀಯ ಸೇನೆ ಬಳಕೆ ಮಾಡುತ್ತಿರುವ ಪೆಲ್ಲೆಟ್ ಗನ್ ಗಳನ್ನು ಬದಲಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಕಾಶ್ಮೀರದಲ್ಲಿ ಪೆಲ್ಲೆಟ್ ಗನ್ ಬಳಕೆ ಕುರಿತಂತೆ ಈಗಾಗಲೇ ಸಮಿತಿಯನ್ನು ರಚಿಸಲಾಗಿದ್ದು ಇನ್ನೆರಡು-ಮೂರು ದಿನಗಳಲ್ಲಿ ಸಮಿತಿ ವರದಿ ಸಲ್ಲಿಸಲಿದೆ. ವರದಿ ಪರಿಶೀಲಿಸಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.

ನಂತರ ಮೆಹಬೂಬಾ ಮುಫ್ತಿಯವರು ಮಾತನಾಡಿ, ಕಲ್ಲು ತೂರಾಟ ನಡೆಸಿ ಹಿಂಸಾಚಾರ ಸೃಷ್ಟಿಸುತ್ತಿರುವವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಲ್ಲು ತೂರಾಟ ಮತ್ತು ಇನ್ನಿತರೆ ಗಲಭೆಗಳು ಇಂದು ಕಾಶ್ಮೀರದಲ್ಲಿನ ಹಿಂಸಾಚಾರ 47ನೇ ದಿನಕ್ಕೆ ಕಾಲಿಡುವಂತೆ ಮಾಡಿದೆ. ಭದ್ರಾತಾ ಸಿಬ್ಬಂದಿಗಳು, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಗುತ್ತಿದೆ. ಗಲಭೆಯಲ್ಲಿ ಸಾವನ್ನಪ್ಪಿದ್ದವರ ಪೈಕಿ ಬಹುತೇಕ ಜನ ಯುವಕರು, ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುವಾಗ ಸಾವನ್ನಪ್ಪಿದ್ದವರಾಗಿದ್ದಾರೆ.

ಕಾಶ್ಮೀರ ರಾಜ್ಯದಲ್ಲಿರುವ ಶೇ.95ರಷ್ಟು ಜನರು ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳು ಇಚ್ಛಿಸುತ್ತಿದ್ದಾರೆ. ಇನ್ನುಳಿದ ಶೇ.5 ರಷ್ಟು ಜನರು ಹಿಂಸಾಚಾರಕ್ಕೆ ಸೃಷ್ಟಿಸುತ್ತಿದ್ದಾರೆ. ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ನಾನಿದ್ದೇನೆ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ನಾನು ಇಚ್ಛಿಸುತ್ತೇನೆ. ಕಲ್ಲು ತೂರಾಟ ಹಾಗೂ ಕ್ಯಾಂಪ್ ಗಳ ಮೇಲೆ ದಾಳಿ ಮಾಡುವುದರಿಂದ ಸಮಸ್ಯೆ ಇತ್ಯರ್ಥಗೊಳ್ಳುವುದಿಲ್ಲ. ಸಮಸ್ಯೆಯನ್ನು ಬದಿಗೊತ್ತಲು ಪ್ರಯತ್ನಿಸುತ್ತಿಲ್ಲ. ಸಮಸ್ಯೆಗೆ ಪರಿಹಾರಬೇಕಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪತ್ರಕರ್ತರೊಬ್ಬರು ಮೆಹಬೂಬಾ ಮುಫ್ತಿ ಅವರಿಗೆ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಂಟಾಗಿರುವ ಹಿಂಸಾಚಾರವನ್ನು ನಿಯಂತ್ರಿಸಲು ಯಾವ ರೀತಿಯ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನೆ ಕೇಳಿದರು. ಇದರಂತೆ ಪತ್ರಕರ್ತರು ಪ್ರಶ್ನೆಗಳ ಸುರಿಮಳೆಯನ್ನು ಸುರಿಸಿದರು. ಇದಕ್ಕೆ ಕೆಂಡಾಮಂಡಲವಾದ ಮೆಹಬೂಬಾ ಅವರು ತಾಳ್ಮೆಯನ್ನು ಕಳೆದುಕೊಂಡು ಪತ್ರಿಕಾಗೋಷ್ಠಿಗೆ ಧನ್ಯವಾದವನ್ನು ಹೇಳಿ ಇದ್ದಕ್ಕಿದ್ದಂತೆ ಹೊರನಡೆದಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com