
ತಿರುವನಂತಪುರಂ: ಕೇರಳದಲ್ಲಿ ಒಂದೆಡೆ ಬಿಜೆಪಿ, ಆರ್ ಎಸ್ ಎಸ್ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶೋಭಾ ಯಾತ್ರೆ ಗಮ್ಮಿಕೊಂಡಿದ್ದರೆ ಅದಕ್ಕೆ ಪರ್ಯಾಯವಾಗಿ ಸಿಪಿಐ(ಎಂ) ಅಭಿಯಾನ ನಡೆಸಿದೆ.
ಸಾಮಾಜಿಕ ಸುಧಾರಕ ಚಟ್ಟಂಬಿ ಸ್ವಾಮಿ ಅವರ ಜನ್ಮ ದಿನಾಚರಣೆ ಅಂಗವಾಗಿ 5 ದಿನಗಳ ಕಾಲ ಸಿಪಿಐ(ಎಂ) ನಮಕ್ಕು ಜಾತಿ ಇಲ್ಲ( ನಮಗೆ ಜಾತಿ ಇಲ್ಲ) ಎಂಬ ಹೆಸರಿನಡಿ ಅಭಿಯಾನ ಹಮ್ಮಿಕೊಂಡಿತ್ತು. ಆದರೆ ಕಾಂಗ್ರೆಸ್ ಸಿಪಿಐ(ಎಂ)ನ ಕ್ರಮಕ್ಕೆ ಅಸಮಾಧಾನ ಅವ್ಯಕ್ತಪಡಿಸಿದ್ದು, ಕೃಷ್ಣ ಜನ್ಮಾಷ್ಟಮಿಯಂದೂ ಅಭಿಯಾನ ನಡೆಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿದೆ. ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಬಿಗಿ ಭದ್ರತೆಯೊಂದಿಗೆ ಕೃಷ್ಣ ಜನ್ಮಾಷ್ಟಮಿ ಮೆರವಣಿಗೆ ನಡೆಸಲಾಗಿದೆ. ಕಣ್ಣೂರು ಜಿಲ್ಲೆಯಲ್ಲಿ ಬಿಜೆಪಿ 450 ಕೃಷ್ಣ ಜಯಂತಿ ಮೆರವಣಿಗೆ ನಡೆಸಿದ್ದರೆ ಸಿಪಿಐ(ಎಂ) ಚಟ್ಟಂಬಿ ಸ್ವಾಮಿ ಅವರ ಜನ್ಮ ದಿನಾಚರಣೆ ಅಂಗವಾಗಿ 305 ಕೇಂದ್ರಗಳಲ್ಲಿ ಮೆರವಣಿಗೆ ನಡೆಸಿದೆ.
Advertisement