

ರಾಯಪುರ: ಮುಟ್ಟಾಗುವ ದಿನಾಂಕ ಹೇಳುವಂತೆ ಮಹಿಳಾ ಟ್ರೈನಿಗಳಿಗೆ ಡಿವೈಎಸ್ಪಿ ಬಲವಂತ ಮಾಡಿದ ಆಘಾತಕಾರಿ ಘಟನೆ ಛತ್ತೀಸ್ ಗಡದ ಚಾಂಕುರಿ ಪೊಲೀಸ್ ತರಬೇತಿ ಕೇಂದ್ರದಲ್ಲಿ ನಡೆದಿದೆ.
ಮಹಿಳಾ ಟ್ರೈನಿ ಡೆಪ್ಯೂಟಿ ಸೂಪರಿಂಡೆಂಟ್ ಆಫ್ ಪೊಲೀಸ್ ಈ ಸಂಬಂಧ ದೂರು ನೀಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ತರಬೇತಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಡಿಎಸ್ ಪಿ ರ್ಯಾಂಕ್ ಅಧಿಕಾರಿ ನೀಲ್ ಕಂಠ್ ಸಾಹು ಪ್ರತಿದಿನ ಮಹಿಳಾ ಟ್ರೈನಿಗಳಿಗೆ ಕಿರುಕುಳ ನೀಡುತ್ತಿದ್ದು, ಮುಟ್ಟಿನ ದಿನಾಂಕ ಹೇಳುವಂತೆ ಹಾಗೂ ಮಟ್ಟಾಗಿರುವವರು ಬಂದು ಪ್ರತ್ಯೇಕ ಸಾಲಿನಲ್ಲಿ ನಿಲ್ಲುವಂತೆ ಹೇಳಿ ಮುಜುಗರ ಉಂಟು ಮಾಡುತ್ತಾರೆ. ಹಾಗೂ ಅಸಭ್ಯವಾಗಿ ಟೀಕಿಸುತ್ತಾರೆ ಎಂದು 32 ಮಹಿಳಾ ಅಧಿಕಾರಿಗಳು ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಪರೇಡ್ ಮಾಡುವ ವೇಳೆ ಕಬದಲು ಹಿಡದು ಎಳೆಯುತ್ತಾರೆ. ಜೊತೆಗೆ ತಮ್ಮ ಬಳಿಯಿರುವ ಕೋಲಿನಿಂದ ತಿವಿಯುತ್ತಾರೆ ಎಂದು ಮತ್ತೊಬ್ಬ ಟ್ರೈನಿ ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನೀಲ್ ಕಂಠ್ ಸಾಹು ವನ್ನು ಡ್ಯೂಟಿಯಿಂದ ರಿಲೀವ್ ಮಾಡಲಾಗಿದೆ. ಅಕಾಡೆಮಿಗೆ ಭೇಟಿ ನೀಡಿದ ಮಹಿಳಾ ಆಯೋಗ ಟ್ರೈನಿಗಳನ್ನು ಭೇಟಿ ಮಾಡಿ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡಿದೆ.