ಸ್ಕಾರ್ಪೀನ್ ಮಾಹಿತಿ ಸೋರಿಕೆಯಲ್ಲಿ ಫ್ರಾನ್ಸ್ ನೌಕಾಪಡೆಯ ಮಾಜಿ ಅಧಿಕಾರಿ ಕೈವಾಡ?

ಡಿಸಿಎನ್ ಎಸ್ ಸಂಸ್ಥೆ ಭಾರತಕ್ಕಾಗಿ ನಿರ್ಮಿಸುತ್ತಿರುವ ಸ್ಕಾರ್ಪೀನ್ ಜಲಾಂತರ್ಗಾಮಿ ನೌಕೆಯ ಸೂಕ್ಷ್ಮ ಮಾಹಿತಿ ಸೋರಿಕೆ ಪ್ರಕರಣದಲ್ಲಿ ಫ್ರಾನ್ಸ್ ನೌಕಾಪಡೆಯ ಮಾಜಿ ಅಧಿಕಾರಿಯ ಕೈವಾಡವಿದೆ ಎಂದು ಶಂಕಿಸಲಾಗುತ್ತಿದೆ.
ಸ್ಕಾರ್ಪೀನ್ ಜಲಾಂತರ್ಗಾಮಿ (ಸಂಗ್ರಹ ಚಿತ್ರ)
ಸ್ಕಾರ್ಪೀನ್ ಜಲಾಂತರ್ಗಾಮಿ (ಸಂಗ್ರಹ ಚಿತ್ರ)

ಸಿಡ್ನಿ: ಡಿಸಿಎನ್ ಎಸ್ ಸಂಸ್ಥೆ ಭಾರತಕ್ಕಾಗಿ ನಿರ್ಮಿಸುತ್ತಿರುವ ಸ್ಕಾರ್ಪೀನ್ ಜಲಾಂತರ್ಗಾಮಿ ನೌಕೆಯ ಸೂಕ್ಷ್ಮ ಮಾಹಿತಿ ಸೋರಿಕೆ ಪ್ರಕರಣದಲ್ಲಿ ಫ್ರಾನ್ಸ್ ನೌಕಾಪಡೆಯ ಮಾಜಿ ಅಧಿಕಾರಿಯ  ಕೈವಾಡವಿದೆ ಎಂದು ಶಂಕಿಸಲಾಗುತ್ತಿದೆ.

ಸ್ಕಾರ್ಪೀನ್ ಜಲಾಂತರ್ಗಾಮಿ ನೌಕೆಯ ಸೂಕ್ಷ್ಮ ಮಾಹಿತಿ ಸೋರಿಕೆ ಕುರಿತು ವರದಿ ಮಾಡಿದ್ದ ದಿ ಆಸ್ಟ್ರೇಲಿಯನ್ ಪತ್ರಿಕೆ ಈ ಬಗ್ಗೆ ಮಾಹಿತಿ ನೀಡಿದ್ದು, 2011ರಲ್ಲಿ ತಯಾರಾಗಿದ್ದ ಜಲಾಂತರ್ಗಾಮಿ  ನೌಕಾ ಮಾಹಿತಿಯನ್ನು ಫ್ರಾನ್ಸ್ ನೌಕಾಪಡೆಯ ಮಾಜಿ ಅಧಿಕಾರಿಯೊಬ್ಬರು ಸೋರಿಕೆ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಿದೆ. ಅಲ್ಲದೆ ತನ್ನ ನೂತನ ವರದಿಯಲ್ಲಿ ಪತ್ರಿಕೆ ನೌಕಾಪಡೆ  ಅಧಿಕಾರಿ ಡಿಸಿಎನ್ ಎಸ್ ಸಂಸ್ಥೆಯ ಉಪಗುತ್ತಿಗೆದಾರನಾಗಿ ಕಾರ್ಯನಿರ್ವಹಿಸಿದ ಕುರಿತು ಕೂಡ ಶಂಕೆ ಪಡಿಸಿದೆ.

ಆದರೆ ಪತ್ರಿಕೆಯ ವರದಿಯನ್ನು ತಳ್ಳಿ ಹಾಕಿರುವ ಫ್ರಾನ್ಸ್ ನ ಡಿಸಿಎನ್ ಎಸ್ ಸಂಸ್ಥೆ ಜಲಾಂತರ್ಗಾಮಿ ನೌಕೆಯ ಮಾಹಿತಿ ಸೋರಿಕೆ ಭಾರತದಿಂದಲೇ ಆಗಿರಬಹುದು. ತನ್ನ ಬಳಿ ಇರುವ ಮಾಹಿತಿ ಸೋರಿಕೆಯಾಗಲು ಸಾಧ್ಯವೇ ಇಲ್ಲ. ಏಕೆಂದರೆ ತಮ್ಮದು ಕೇವಲ ನೌಕೆ ನಿರ್ಮಿಸಿ ರವಾನೆ ಮಾಡುವ ಸಂಸ್ಥೆಯಾಗಿದ್ದು, ತಾಂತ್ರಿಕ ಮಾಹಿತಿ ನಿಯಂತ್ರಣ ತನ್ನ ಬಳಿ ಇರುವುದಿಲ್ಲ ಎಂದು ಹೇಳಿದೆ.

ಭಾರತೀಯ ನೌಕಾಪಡೆಯ ಭವಿಷ್ಯದ ಪ್ರಮುಖ ಅಸ್ತ್ರವೆಂದೇ ಬಣ್ಣಿಸಲಾಗುತ್ತಿದ್ದ ಸ್ಕಾರ್ಪೀನ್ ಜಲಾಂತರ್ಗಾಮಿ ನೌಕೆಯ ಪ್ರಮುಖ ಮಾಹಿತಿಗಳು ಸೋರಿಕೆಯಾದ ಕುರಿತು ನಿನ್ನೆ ದಿ  ಆಸ್ಟ್ರೇಲಿಯನ್ ಪತ್ರಿಕೆ ವರದಿ ಮಾಡಿತ್ತು. ಜಲಾಂತರ್ಗಾಮಿಗೆ ಸಂಬಂಧಿಸಿದ ಸುಮಾರು 22,400 ಪುಟಗಳಷ್ಟು ಸೂಕ್ಷ್ಮ ದಾಖಲೆಗಳು ಸೋರಿಕೆಯಾಗಿದ್ದು, ಈ ಪೈಕಿ ನೌಕೆಯ ಶಬ್ದದ ಪ್ರಮಾಣ,  ವೇಗ ಮತ್ತು ಶಸ್ತ್ರಾಸ್ತ್ರ ಸಾಮರ್ಥ್ಯಗಳಂತಹ ನಿರ್ಬಂಧಿತ ಮಾಹಿತಿಗಳೂ ಸೇರಿವೆ ಎಂದು ಪತ್ರಿಕೆ ತನ್ನ ವರದಿಯಲ್ಲಿ ತಿಳಿಸಿತ್ತು.

ಪ್ರಸ್ತುತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ರಕ್ಷಣಾ ಇಲಾಖೆ ತನಿಖೆಗೆ ಆದೇಶಿಸಿದ್ದು, ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಸೇನಾಧಿಕಾರಿಗಳಿಂದ ವರದಿ  ಕೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com