ಶೀನಾ ಬೋರಾ ಮರ್ಡರ್ ಕೇಸ್ ಗೆ ಹೊಸ ಟ್ವಿಸ್ಟ್: ಮಾಧ್ಯಮಗಳಿಗೆ ಸಿಕ್ಕಿದೆ ಆಡಿಯೋ ಟೇಪ್

ದೇಶಾದ್ಯಂತ ಸಂಚಲನ ಮೂಡಿಸಿದ್ದ ಶೀನಾ ಬೋರಾ ಕೊಲೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ದೊರೆತಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದಿರುವ ಸಂಭಾಷಣೆ ..
ಶೀನಾ ಬೋರಾ
ಶೀನಾ ಬೋರಾ

ನವದೆಹಲಿ: ದೇಶಾದ್ಯಂತ ಸಂಚಲನ ಮೂಡಿಸಿದ್ದ ಶೀನಾ ಬೋರಾ ಕೊಲೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ದೊರೆತಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದಿರುವ ಸಂಭಾಷಣೆ ಟೇಪ್ ಸಿಬಿಐ ಕೈ ಸೇರಿದೆ.

ತಾಯಿ ಇಂದ್ರಾಣಿ ಮುಖರ್ಜಿ ಹಾಗೂ ಪೀಟರ್ ಮುಖರ್ಜಿ ಹಾಗೂ ಶೀನಾ ಬೋರಾ ಸಹೋದರ ರಾಹುಲ್ ಮುಖರ್ಜಿ ನಡುವಿನ ದೂರವಾಣಿ ಸಂಭಾಷಣೆಯ 20 ಧ್ವನಿ ಸುರುಳಿಯ ತುಣುಕುಗಳು ಸಿಬಿಐ ಕೈ ಸೇರಿದ್ದು, ಅದರಲ್ಲಿ ಕೆಲ ಆಡಿಯೋ ಟೇಪ್ ಆಂಗ್ಲ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.

ಈ ಸಂಭಾಷಣೆಗಳನ್ನು ಶೀನಾ ಬೋರಾ ಸಹೋದರ ರಾಹುಲ್ ಮುಖರ್ಜಿ ಸಿಬಿಐ ಅಧಿಕಾರಿಗಳಿಗೆ ಹಾಗೂ ಮಾಧ್ಯಮಗಳಿಗೆ ನೀಡಿದ್ದಾರೆ ಎಂದು ಎನ್ನಲಾಗಿದೆ.

ಮಾಧ್ಯಮ ದೊರೆ ಪೀಟರ್ ಮುಖರ್ಜಿ ಹಾಗೂ ಇಂದ್ರಾಣಿ ಮುಖರ್ಜಿ ನಡುವೆ ನಡೆದ ರಹಸ್ಯ ಸಂಭಾಷಣೆಯಿದೆ ಎಂದು ಸ್ವತಃ ರಾಹುಲ್ ತಿಳಿಸಿ, ಪ್ರಕರಣದಲ್ಲಿ ನ್ಯಾಯ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ 20 ಸಂಭಾಷಣೆಗಳಲ್ಲಿ ಸಿಬಿಐ ಕೇವಲ ಐದು ತುಣುಕುಗಳನ್ನು ಆಯ್ದುಕೊಂಡು ಪರಿಶೀಲನೆ ಕೈಗೊಂಡು ನ್ಯಾಯಾಲಯಕ್ಕೆನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದ್ರಾಣಿ ಮುಖರ್ಜಿ ಮತ್ತು ಪೀಟರ್ ಮುಖರ್ಜಿ ಜೈಲಿನಲ್ಲಿದ್ದಾರೆ. 2012 ರ ಏಪ್ರಿಲ್ ನಲ್ಲಿ ಕಾರು ಚಾಲಕನ ಜೊತೆ ಸೇರಿ ಇಂದ್ರಾಣಿ ಮುಖರ್ಜಿ ಶೀನಾ ಬೋರಾಳನ್ನು ಹತ್ಯೆ ಮಾಡಿದ್ದಳು ಎಂದು ಆರೋಪಿಸಲಾಗಿದೆ. ಕಳೆದ ವರ್ಷ ಆಗಸ್ಟ್ ನಲ್ಲಿ ರಾಯಗಡ ಅರಣ್ಯ ಪ್ರದೇಶದಲ್ಲಿ ಶೀನಾ ಮೃತ ದೇಹ ಪತ್ತೆಯಾಗಿ ಪ್ರಕರಣ ಬೆಳಕಿಗೆ ಬಂದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com