ಬಿಎಸ್ ಪಿ ನಾಯಕ ಸುಧೀಂದ್ರ ಭಾದೋರಿಯಾ
ದೇಶ
ರಾಜಕೀಯ ಉದ್ದೇಶಕ್ಕಾಗಿ ಮುಲಾಯಂ ಯಾರನ್ನು ಬೇಕಾದರೂ ಸಾಯಿಸುತ್ತಾರೆ: ಬಿಎಸ್ ಪಿ ಆರೋಪ
ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ತಮ್ಮ ರಾಜಕೀಯ ಉದ್ದೇಶಕ್ಕಾಗಿ ಯಾರನ್ನು ಬೇಕಾದರೂ ಸಾಯಿಸುತ್ತಾರೆಂದು ಬಿಎಸ್ ಪಿ...
ನವದೆಹಲಿ: ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ತಮ್ಮ ರಾಜಕೀಯ ಉದ್ದೇಶಕ್ಕಾಗಿ ಯಾರನ್ನು ಬೇಕಾದರೂ ಸಾಯಿಸುತ್ತಾರೆಂದು ಬಿಎಸ್ ಪಿ ಭಾನುವಾರ ಆರೋಪಿಸಿದೆ.
ಈ ಕುರಿತಂತೆ ಮಾತನಾಡಿರುವ ಬಿಎಸ್ ಪಿ ನಾಯಕ ಸುಧೀಂದ್ರ ಭಾದೋರಿಯಾ ಅವರು, ಉತ್ತರಪ್ರದೇಶದಲ್ಲಿ ಸಾಕಷ್ಟು ರಾಜಕೀಯ ಆಟ ಆಡಿರುವ ಮುಲಾಯಂ ಅವರು, ತಮ್ಮ ಗೆಲುವಿಗಾಗಿ ವಿವಿಧ ಧರ್ಮಗಳ ಜನರನ್ನು ಹತ್ಯೆ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.
ಇಂದು ಉತ್ತರಪ್ರದೇಶದ ಮೇಲಿನ ಹಿಡಿತವನ್ನು ಮುಲಾಯಂ ಕಳೆದುಕೊಳ್ಳುತ್ತಿದ್ದಾರೆ. ಮತ್ತೆ ಅಧಿಕಾರಕ್ಕೆ ಬರುವ ಸಲುವಾಗಿ ರಾಜಕೀಯ ಆಟವಾಡಲು ಯತ್ನಿಸುತ್ತಿದ್ದಾರೆ. ತಮ್ಮ ರಾಜಕೀಯ ಉದ್ದೇಶಕ್ಕಾಗಿ ಕೆಲವೊಮ್ಮೆ ಮುಸ್ಲಿಮರು, ಕೆಲವೊಮ್ಮೆ ಹಿಂದೂಗಳನ್ನು ಸಾಯಿಸುತ್ತಾರೆ. ದಾದ್ರಿ ಪ್ರಕರಣದಲ್ಲೂ ಹೀಗೆ ಆಯಿತು. ಸಮಯ ಸಾಧಕತೆ ಸುತ್ತ ಅವರ ರಾಜಕೀಯವಿದೆ ಎಂದು ಹೇಳಿದ್ದಾರೆ.

