ಸತ್ತ ಕುದುರೆ ಮಾತನಾಡದಿರಬಹುದು ಆದರೆ, ನಾನು ಮಾತನಾಡುತ್ತೇನೆ: ಬಿಜೆಪಿ ಶಾಸಕನಿಗೆ ರಾಬರ್ಟ್

ಪೊಲೀಸ್ ಕುದುರೆ ಶಕ್ತಿಮಾನ್‌ ಸಾವು ಪ್ರಕರಣ ಕುರಿತಂತೆ ಬಿಜೆಪಿ ಶಾಸಕ ಗಣೇಶ್ ಜೋಶಿ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷೆ ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ ನಡುವೆ...
ಕಾಂಗ್ರೆಸ್ ಉಪಾಧ್ಯಕ್ಷೆ ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ (ಸಂಗ್ರಹ ಚಿತ್ರ)
ಕಾಂಗ್ರೆಸ್ ಉಪಾಧ್ಯಕ್ಷೆ ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ (ಸಂಗ್ರಹ ಚಿತ್ರ)

ವಾದ್ರಾ: ಪೊಲೀಸ್ ಕುದುರೆ ಶಕ್ತಿಮಾನ್‌ ಸಾವು ಪ್ರಕರಣ ಕುರಿತಂತೆ ಬಿಜೆಪಿ ಶಾಸಕ ಗಣೇಶ್ ಜೋಶಿ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷೆ ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ ನಡುವೆ ವಿಮಾನ ನಿಲ್ದಾಣವೊಂದರಲ್ಲಿ ಭಾನುವಾರ ಮಾತಿನ ಚಕಮಕಿ ನಡೆದಿದೆ.

ಪೊಲೀಸ್ ಕುದುರೆ ಶಕ್ತಿಮಾನ್‌ಗೆ ಹೊಡೆದು ಅದರ ಕಾಲು ಮುರಿದು, ಸಾವಿಗೆ ಕಾರಣರಾಗಿದ್ದ ಬಿಜೆಪಿ ಶಾಸಕ ಗಣೇಶ್ ಜೋಷಿಯವರು, ಕೆಲ ಬಿಜೆಪಿ ಸಂಸದರನ್ನು ಸ್ವಾಗತಿಸುವ ಸಲುವಾಗಿ ಡೆಹ್ರಾಡೂನ್ ನ ವಿಮಾನ ನಿಲ್ದಾಣಕ್ಕೆ ಹೋಗಿದ್ದಾರೆ.

ರಾಬರ್ಟ್ ವಾದ್ರಾ ಕೂಡ ಅದೇ ವಿಮಾನ ನಿಲ್ದಾಣದಲ್ಲಿ ಹಾಜರಿದ್ದರು. ಈ ವೇಳೆ ಶಕ್ತಿಮಾನ್ ಕುರಿತಂತೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.

ಈ ಕುರಿತಂತೆ ಮಾತನಾಡಿರುವ ವಾದ್ರಾ ಅವರು, ವಿಮಾನ ನಿಲ್ದಾಣದಲ್ಲಿ ಜೋಷಿಯವರು ಬಿಜೆಪಿ ಸಂಸದರನ್ನು ಸ್ವಾಗತಿಸುತ್ತಿದ್ದರು. ಈ ವೇಳೆ ಶಕ್ತಿಮಾನ್ ಸಾವು ಕುರಿತಂತೆ ನನಗನ್ನಿಸಿದ್ದನ್ನು ನಾನು ಅವರಿಗೆ ಹೇಳಿದೆ. ನಂತರ ಇದ್ದಕ್ಕಿದ್ದಂತೆ ನನ್ನ ಮೇಲೆ ಕೂಗಾಡಲು, ಕಿರುಚಾಡಲು ಆರಂಭಿಸಿದರು. ಅಲ್ಲದೆ, ಬೆದರಿಕೆಗಳನ್ನು ಹಾಕಿದರು. ಸತ್ತ ಕುದುರೆ ಮಾತನಾಡದಿರಬಹುದು, ಆದರೆ ನಾನು ಮಾತನಾಡುತ್ತೇನೆಂದು ಅವರಿಗೆ ಹೇಳಿದೆ.

ಕೂಗಾಡುತ್ತಿದ್ದ ಕಾರಣ ಬಿಜೆಪಿ ಶಾಸಕ ಹಾಗೂ ಅವರ ಜೊತೆಗಿದ್ದ ಗೂಂಡಾಗಳನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಹೊರ ಹಾಕಿದರು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com