ಸಾಲ ತೀರಿಸಲಾಗದೆ, ಮಗುವನ್ನು ಅಡವಿಟ್ಟ ದಂಪತಿ

ಸಾಲ ಪಡೆದುಕೊಂಡ ಹಣವನ್ನು ಹಿಂತಿರುಗಿಸಲಾರದೆ ವ್ಯಕ್ತಿಯೊಬ್ಬ ತನ್ನ ಆರು ತಿಂಗಳ ನವಜಾತ ಶಿಶುವನ್ನು ಅಡವಿಟ್ಟ ಪ್ರಕರಣ ರಾಜಸ್ತಾನದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಜೈಪುರ: ಸಾಲ ಪಡೆದುಕೊಂಡ ಹಣವನ್ನು ಹಿಂತಿರುಗಿಸಲಾರದೆ ವ್ಯಕ್ತಿಯೊಬ್ಬ ತನ್ನ ಆರು ತಿಂಗಳ ನವಜಾತ ಶಿಶುವನ್ನು ಅಡವಿಟ್ಟ ಪ್ರಕರಣ ರಾಜಸ್ತಾನದ ಟಾಂಕ್ ಜಿಲ್ಲೆಯಲ್ಲಿ ನಡೆದಿದೆ.
ಸಾಲ ನೀಡಿದಾತ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಗೆ ನೀಡಿದ್ದು, ಅದು ಮಕ್ಕಳ ಪಾಲನೆ ವಸತಿಗೆ ನೋಡಿಕೊಳ್ಳಲು ಕಳುಹಿಸಿದೆ.
ಕಾಲು ರಾಮ್ ಎಂಬ ವ್ಯಕ್ತಿ ಬಾಲು ರಾಮ್ ಎಂಬವನಿಂದ 20 ಸಾವಿರ ರೂಪಾಯಿ ಸಾಲ ಪಡೆದಿದ್ದ. ಕಳೆದ ಏಪ್ರಿಲ್ 11ರಂದು ಬಾಲು ರಾಮ್ ಬಳಿ ಬಂದ ಕಾಲು ರಾಮ್ ಮತ್ತವನ ಪತ್ನಿ ಬಂದು ತಮಗೆ ಸಾಲವನ್ನು ಹಿಂತಿರುಗಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ತಮ್ಮ ನವಜಾತ ಶಿಶುವನ್ನು ಅಡವು ನೀಡಿ ಹೊರಟುಹೋದರು.
ಬಾಲು ರಾಮು ಅದೇ ದಿನ ಶಿಶುವನ್ನು ಮಕ್ಕಳ ಪಾಲನಾ ಸಮಿತಿ ಪೀಠದ ಮುಂದೆ ಹಾಜರುಪಡಿಸಿ ಇಡೀ ಘಟನೆಯನ್ನು ವಿವರಿಸಿದರು. ನ್ಯಾಯಪೀಠ ಶಿಶುವಿಗೆ ಬರ್ದಾನ್ ಎಂದು ಹೆಸರಿಟ್ಟು ಅದನ್ನು ಮಕ್ಕಳ ವಸತಿಗೆ ಕಳುಹಿಸಿದ್ದೇವೆ ಎಂದು ಸಮಿತಿಯ ಅಧ್ಯಕ್ಷೆ ಮಾಯಾ ಸುಬಲ್ಕ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಮಕ್ಕಳ ಕಲ್ಯಾಣ ಸಮಿತಿ ಅಲ್ಲಿನ ಪೊಲೀಸ್ ವರಿಷ್ಠರಿಗೆ ಮತ್ತು ಸ್ಥಳೀಯ ಪೊಲೀಸರಿಗೆ ನಿರ್ದೇಶನ ನೀಡಿ ಮಗುವಿನ ಪೋಷಕರನ್ನು ಪತ್ತೆ ಹಚ್ಚುವಂತೆ ಸೂಚಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com