ಸೆಪ್ಟೆಂಬರ್ 4ರಂದು ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸರ್ವಪಕ್ಷ ನಿಯೋಗ ಕಾಶ್ಮೀರ ಭೇಟಿ

ಅಶಾಂತಿ, ಹಿಂಸಾಚಾರವನ್ನು ಕಂಡಿರುವ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಶಾಂತಿ ತರುವ ನಿಟ್ಟಿನಲ್ಲಿ ವಿವಿಧ...
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್
ನವದೆಹಲಿ: ಅಶಾಂತಿ, ಹಿಂಸಾಚಾರವನ್ನು ಕಂಡಿರುವ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಶಾಂತಿ ತರುವ ನಿಟ್ಟಿನಲ್ಲಿ ವಿವಿಧ ವರ್ಗಗಳ ಜನರೊಂದಿಗೆ ಮಾತುಕತೆ ನಡೆಸಲು ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸರ್ವಪಕ್ಷ ನಿಯೋಗ ಸೆಪ್ಟೆಂಬರ್ 4ರಂದು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಲಿದೆ.
ನಿಯೋಗ ಸೆಪ್ಟೆಂಬರ್ 4ರಂದು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಲಿದ್ದು, ಗೃಹ ಸಚಿವರು ಮುಂದಾಳತ್ವ ವಹಿಸಲಿದ್ದಾರೆ ಎಂದು ಗೃಹ ಸಚಿವಾಲಯದ ವಕ್ತಾರ ತಿಳಿಸಿದ್ದಾರೆ.
ಹಿಜ್ ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿಯ ಹತ್ಯೆಯ ಬಳಿಕ ಕಾಶ್ಮೀರ ಕಣಿವೆ ವ್ಯಾಪಕ ಹಿಂಸಾಚಾರ, ಪ್ರತಿಭಟನೆ ಕಂಡಿದ್ದು, ವಿವಿಧ ವರ್ಗಗಳ ಜನರನ್ನು ಭೇಟಿ ಮಾಡಿ ಅವರನ್ನು ಸಮಾಧಾನಪಡಿಸಿ ಶಾಂತಿ ಸ್ಥಾಪಿಸಲು ನಿಯೋಗ ಭೇಟಿ ಮಾಡುವ ಉದ್ದೇಶ ಹೊಂದಿದೆ. ಈ ಸಂದರ್ಭದಲ್ಲಿ ಕಾಶ್ಮೀರದ ಪ್ರತ್ಯೇಕತಾವಾದಿ ಮುಖಂಡರನ್ನು ಮತ್ತು ಸಂಘಟನೆಗಳನ್ನು ಭೇಟಿ ಮಾಡಲಿದೆ.
ನಿನ್ನೆ ಗೃಹ ಸಚಿವ ರಾಜನಾಥ್ ಸಿಂಗ್ ಒಂದು ಗಂಟೆಗೂ ಹೆಚ್ಚು ಕಾಲ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಹಣಕಾಸು ಸಚಿವ ಅರುಣ್ ಜೇಟ್ಲಿ, ಪ್ರಧಾನಿ ಸಚಿವಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರೊಡನೆ ಸಭೆ ನಡೆಸಿ ಸರ್ವ ಪಕ್ಷ ನಿಯೋಗದ ವಿಧಾನಗಳನ್ನು ಚರ್ಚೆ ನಡೆಸಿತು.ನಿಯೋಗದಲ್ಲಿ ಯಾರ್ಯಾರು ಇರಬೇಕೆಂದು, ಏನು ಚರ್ಚೆ ಮಾಡಬೇಕೆಂಬುದನ್ನು ಕೂಡ ನಿಶ್ಚಯಿಸಿತು.
ನಿನ್ನೆ ತಮ್ಮ ರೇಡಿಯೋ ಭಾಷಣ ಮನ್ ಕಿ ಬಾತ್ ನಲ್ಲಿ ಕಾಶ್ಮೀರ ಸಮಸ್ಯೆ ವಿಷಯ ಪ್ರಸ್ತಾಪಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಏಕತೆ ಮತ್ತು ಮಮತೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿದೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com