ಅಪ್ರಾಪ್ತ ಪತ್ನಿಯೊಂದಿಗೆ ಪತಿಯ ಲೈಂಗಿಕತೆ ತಪ್ಪಲ್ಲ; ಹೈಕೋರ್ಟ್ ಗೆ ಕೇಂದ್ರ ಸರ್ಕಾರ

ಅತ್ಯಾಚಾರ ಕುರಿತ ಭಾರತೀಯ ದಂಡ ಸಂಹಿತೆಯ ಕಾನೂನನ್ನು ಬೆಂಬಲಿಸಿರುವ ಕೇಂದ್ರ ಸರ್ಕಾರ 15 ವರ್ಷ ಮೇಲ್ಪಟ್ಟ ಪತ್ನಿಯೊಂದಿಗಿನ ಲೈಂಗಿಕತೆ ತಪ್ಪಲ್ಲ ಎಂದು ಹೈಕೋರ್ಟ್ ನಲ್ಲಿ ವಾದ ಮಂಡಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಅತ್ಯಾಚಾರ ಕುರಿತ ಭಾರತೀಯ ದಂಡ ಸಂಹಿತೆಯ ಕಾನೂನನ್ನು ಬೆಂಬಲಿಸಿರುವ ಕೇಂದ್ರ ಸರ್ಕಾರ 15 ವರ್ಷ ಮೇಲ್ಪಟ್ಟ ಪತ್ನಿಯೊಂದಿಗಿನ ಲೈಂಗಿಕತೆ ತಪ್ಪಲ್ಲ ಎಂದು ಹೈಕೋರ್ಟ್ ನಲ್ಲಿ ವಾದ ಮಂಡಿಸಿದೆ.

ಭಾರತೀಯ ದಂಡ ಸಂಹಿತೆ ಕಾನೂನಿಗೆ ತಿದ್ದುಪಡಿ ತರಬೇಕು ಎನ್ನುವ ಮನವಿ ಕುರಿತು ದಾಖಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಕೇಂದ್ರ  ಸರ್ಕಾರಕ್ಕೆ ಸೂಚಿಸಿತ್ತು. ಈ ಹಿನ್ನಲೆಯಲ್ಲಿ ಇಂದು ಮುಖ್ಯ ನ್ಯಾಯಮೂರ್ತಿ ರೋಹಿಣಿ ಹಾಗೂ ನ್ಯಾಯಮೂರ್ತಿ ಸಂಗೀತಾ ದಿಗ್ರಾ ಸೆಹಗಲ್ ನೇತೃತ್ವದ ದ್ವಿಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸಿದೆ.

ವಿಚಾರಣೆ ವೇಳೆ ತನ್ನ ನಿಲುವು ಸ್ಪಷ್ಟಪಡಿಸಿದ ಕೇಂದ್ರ ಸರ್ಕಾರ ಐಪಿಸಿ ಸೆಕ್ಷನ್ 375 (ಅತ್ಯಾಚಾರ) ನ ಅಡಿಯಲ್ಲಿ ಸಾಂಪ್ರದಾಯಿಕ ಕಟ್ಟುಪಾಡಿನಲ್ಲಿ ವಿವಾಹವಾದ ಪತಿ-ಪತ್ನಿಯರ ನಡುವಿನ ಲೈಂಗಿಕತೆ ಅತ್ಯಾಚಾರವಾಗುವುದಿಲ್ಲ, ಇಂತಹ ಕೃತ್ಯಗಳು ಅಸವಿಂಧಾನಿಕ ಅಥವಾ ಪರಿಚ್ಛೇದ 14 ಮತ್ತು 21ರ ಉಲ್ಲಂಘನೆಯಾಗುವುದಿಲ್ಲ ಎಂದು ಸರ್ಕಾರ ಹೈಕೋರ್ಟ್ ಗೆ ಸ್ಪಷ್ಟಪಡಿಸಿದೆ.

ಅಂತೆಯೇ 15 ವರ್ಷ ಮೇಲ್ಪಟ್ಟ ಪತ್ನಿಯೊಂದಿಗೆ ಪತಿ ನಡೆಸುವ ಲೈಂಗಿಕತೆ ಅಥವಾ ಆಕ್ರಮಣ ಕೂಡ ಐಪಿಸಿ ಸೆಕ್ಷನ್ 375ರ ಅಡಿಯಲ್ಲಿ ಬರುವುದಿಲ್ಲ ಎಂದು ಕೇಂದ್ರ ಸರ್ಕಾರ ಹೈಕೋರ್ಟ್ ಗೆ ಸ್ಪಷ್ಟಪಡಿಸಿದೆ. ಇದರ ನಡುವೆಯೇ ಕೇಂದ್ರ ಸರ್ಕಾರ, ದೇಶದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಯಲ್ಲಿ ಅಸಮಾನತೆ ಇರುವುದರಿಂದ ಬಾಲ್ಯ ವಿವಾಹದಂತಹ  ಪಿಡುಗುಗಳು ಇನ್ನೂ ಅಸ್ಥಿತ್ವದಲ್ಲಿದೆ ಎಂದೂ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com