
ನವದೆಹಲಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟಗಳು ಇದೇ ಸೆಪ್ಟೆಂಬರ್ 2, ಶುಕ್ರವಾರಂದ ಭಾರತ್ ಬಂದ್ ಗೆ ಕರೆ ನೀಡಿದೆ.
ಕೃಷಿಯೇತರ ಕೌಶಲರಹಿತ ಕಾರ್ಮಿಕರ ಕನಿಷ್ಠ ದಿನಗೂಲಿಯನ್ನು ಏರಿಕೆ ಮಾಡಬೇಕು ಎನ್ನುವ ಕಾರ್ಮಿಕ ಒಕ್ಕೂಟಗಳ ಬೇಡಿಕೆಗೆ ಕೇಂದ್ರ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂಧಿಸದ ಹಿನ್ನಲೆಯಲ್ಲಿ ಇದೇ ಶುಕ್ರವಾರ ಭಾರತ್ ಬಂದ್ ಗೆ ಕರೆ ನೀಡಲಾಗಿದೆ. ಕಾರ್ಮಿಕ ಒಕ್ಕೂಟಗಳ ಮನವೊಲಿಕೆಗಾಗಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ನಡೆಸಿದ ಸಂಧಾನ ಪ್ರಕ್ರಿಯೆ ವಿಫಲವಾಗಿದ್ದು, ಇದೇ ಕಾರಣಕ್ಕೆ ಭಾರತ್ ಬಂದ್ ಅನ್ನು ನಡೆಸಿಯೇ ತೀರುತ್ತೇವೆ ಎಂದು ಕಾರ್ಮಿಕ ಒಕ್ಕೂಟಗಳು ಸ್ಪಷ್ಟಪಡಿಸಿವೆ.
ಇನ್ನು ಕಾರ್ಮಿಕ ಸಂಘಟನೆಗಳು ಪಟ್ಟು ಸಡಿಲಿಸದೇ ಹೋದಲ್ಲಿ ಸರಕಾರಿ ಕಚೇರಿ ಗಳು, ಬ್ಯಾಂಕ್‌ಗಳು, ಕೈಗಾರಿಕೆಗಳು ದೇಶಾದ್ಯಂತ ಕಾರ್ಯನಿರ್ವಹಿಸುವ ಸಂಭವ ಕಡಿಮೆ. ದೇಶದ ಹಲವು ರಾಜ್ಯಗಳ ಕಾರ್ಮಿಕ ಸಂಘಟನೆಗಳ ಬೆಂಬಲವೂ ಈ ಮುಷ್ಕರಕ್ಕೆ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸಂಚಾರ ವ್ಯವಸ್ಥೆಯೂ ಸ್ಥಗಿತಗೊಳ್ಳುವ ಎಲ್ಲ ಸಾಧ್ಯತೆಗಳೂ ಇವೆ.
Advertisement