ಭಗ್ವಂತ್ ಮಾನ್ ಡಿ.9ರವರೆಗೆ ಸಂಸತ್ ಕಲಾಪಕ್ಕೆ ಹಾಜರಾಗುವಂತಿಲ್ಲ: ಸ್ಪೀಕರ್

ಸಂಸತ್ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಿರುವ ಎಎಪಿಯ ಲೋಕಸಭಾ ಸದಸ್ಯ ಭಗ್ವಂತ್ ಮಾನ್ ಅವರು ಡಿಸೆಂಬರ್ 9ರವರೆಗೆ...
ಭಗ್ವಂತ್ ಮಾನ್
ಭಗ್ವಂತ್ ಮಾನ್
Updated on: 
ನವದೆಹಲಿ: ಸಂಸತ್ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಿರುವ ಎಎಪಿಯ ಲೋಕಸಭಾ ಸದಸ್ಯ ಭಗ್ವಂತ್ ಮಾನ್ ಅವರು ಡಿಸೆಂಬರ್ 9ರವರೆಗೆ ಸಂಸತ್ ಕಾಲಪಕ್ಕೆ ಹಾಜರಾಗುವಂತಿಲ್ಲ ಎಂದು ಶುಕ್ರವಾರ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಘೋಷಿಸಿದ್ದಾರೆ.
ಆಪ್ ಸಂಸದನಿಗೆ ಶಿಕ್ಷೆ ವಿಧಿಸಿರುವ ಸ್ಪೀಕರ್,  ಮಾನ್ ಅವರು ಸಂಸತ್ ಸಂಕೀರ್ಣದ ವೀಡಿಯೊ ಚಿತ್ರೀಕರಣ ಮಾಡಿ, ಸಾಮಾಜಿಕ ತಾಣದಲ್ಲಿ ಪ್ರಕಟಿಸಿದ ಪ್ರಕರಣವನ್ನು 9 ಸದಸ್ಯರನ್ನೊಳಗೊಂಡ ಸಂಸತ್ ಸಮಿತಿ ತನಿಖೆ ನಡೆಸಿದೆ ಎಂದು ಹೇಳಿದ್ದಾರೆ.
ಸಂಸತ್ ನ ನಿಯಮಗಳನ್ನು ಉಲ್ಲಂಘಿಸಿದ್ದ ಭಗ್ವಂತ್ ಮಾನ್, ಜುಲೈ 21 ರಂದು ಸಂಸತ್ ವಿಡಿಯೊ ಚಿತ್ರೀಕರಿಸಿ ಫೇಸ್‌ಬುಕ್‌ನಲ್ಲಿ ಪ್ರಸಾರ ಮಾಡಿದ್ದರು. ಈ ಬಗ್ಗೆ ತನಿಖೆ ನಡೆಸಲು ಸ್ಪೀಕರ್ ಸುಮಿತ್ರಾ ಮಹಾಜನ್ ಅವರು 9 ಸದಸ್ಯರ ಸಮಿತಿಯೊಂದನ್ನು ರಚಿಸಿದ್ದರು. ಕಿರಿಟ್‌ ಸೋಮಯ್ಯ ನೇತೃತ್ವದ ಸಮಿತಿ ಭಗ್ವಂತ್ ಮಾನ್ ಅವರು ತಪ್ಪಿತಸ್ಥ ಎಂದು ಸ್ಪೀಕರ್ ಗೆ ವರದಿ ನೀಡಿತ್ತು. 
ವಿಡಿಯೋ ಚಿತ್ರೀಕರಣ ಮಾಡಿದ್ದಕ್ಕೆ ಈಗಾಗಲೇ ಭಗ್ವಂತ್ ಮಾನ್ ಭೇಷರತ್ ಕ್ಷಮೆಯನ್ನು ಯಾಚಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com