ಗುಜರಾತ್ ಉದ್ಯಮಿಯಿಂದ 13000 ಕೋಟಿ ಕಪ್ಪುಹಣ ಘೋಷಣೆ: ತೆರಿಗೆ ಕಟ್ಟುವಲ್ಲಿ ವಿಫಲ

ದಾಖಲೆಗಳಿಲ್ಲದ 13 ಸಾವಿರ ಕೋಟಿ ರುಪಾಯಿ ಪ್ರಮಾಣದ ಆದಾಯವನ್ನು ಘೋಷಿಸಿಕೊಂಡಿದ್ದ ಅಹಮದಾಬಾದ್ ಉದ್ಯಮಿ ಮಹೇಶ್ ಶಾ ಎಂಬುವರು...
ಕಪ್ಪುಹಣ
ಕಪ್ಪುಹಣ
Updated on: 
ಅಹಮದಾಬಾದ್: ದಾಖಲೆಗಳಿಲ್ಲದ 13 ಸಾವಿರ ಕೋಟಿ ರುಪಾಯಿ ಪ್ರಮಾಣದ ಕಪ್ಪುಹಣವನ್ನು ಘೋಷಿಸಿಕೊಂಡಿದ್ದ ಅಹಮದಾಬಾದ್ ಉದ್ಯಮಿ ಮಹೇಶ್ ಶಾ ಎಂಬುವರು ಆದಾಯ ತೆರಿಗೆಯ ಮೊದಲ ಕಂತಿನ ಹಣವನ್ನು ಪಾವತಿಸಲು ವಿಫಲನಾಗಿದ್ದಾನೆ. 
ಕೇಂದ್ರ ಸರ್ಕಾರದ ಆದಾಯ ಘೋಷಣೆ ಯೋಜನೆ(ಐಡಿಎಸ್)ಯಡಿ ಕಪ್ಪುಹಣವನ್ನು ಘೋಷಿಸಿಕೊಳ್ಳಲು ಸೆಪ್ಟೆಂಬರ್ 30ರವರೆಗೆ ಅವಕಾಶ ನೀಡಿತ್ತು. ಈ ಹಿನ್ನೆಲೆ ಮಹೇಶ್ 13 ಸಾವಿರ ಕೋಟಿ ರುಪಾಯಿ ಕಾಳಧನ ಘೋಷಿಸಿಕೊಂಡಿದ್ದರು. 
ಐಡಿಎಸ್ ಯೋಜನೆಯಡಿ ಕಪ್ಪುಹಣ ಘೋಷಿಸಿಕೊಂಡವರಿಗೆ ತೆರಿಗೆ ಹಣದ ಕಂತನ್ನು ಪಾವತಿಸಿದಾಕ್ಷಣ ಆದಾಯ ತೆರಿಗೆ ಇಲಾಖೆಯ ಕಾನೂನು ಕ್ರಮಗಳಿಂದ ರಕ್ಷಣೆ ಸಿಗುತ್ತದೆ. ಅದರಂತೆ ಕಾಳಧನ ಘೋಷಿಸಿಕೊಂಡಿದ್ದ ಮಹೇಶ್ ಮೊದಲ ಕಂತಿನ ಕೇವಲ 975 ಕೋಟಿ ರುಪಾಯಿ ತೆರಿಗೆ ಪಾವತಿಸುವಲ್ಲಿ ವಿಫಲರಾಗಿದ್ದಾರೆ. 
ಮಹೇಶ್ ಶಾ ಅಲ್ಪ ತೆರಿಗೆ ಕಟ್ಟುವಲ್ಲಿ ವಿಫಲರಾಗಿದ್ದು ಯಾಕೆ ಎಂದು ಶೋಧ ಕಾರ್ಯದಲ್ಲಿ ತೊಡಗಿದಾಗ ಅಧಿಕಾರಿಗಳಿಗೆ ತಿಳಿದ ವಿಚಾರವೆಂದರೆ. ಉದ್ಯಮಿ ಶಾ ಅಹಮದಾಬಾದ್ ಹಲವು ದೊಡ್ಡ ದೊಡ್ಡ ಕಾಳಧನಿಕರ ಪರವಾಗಿ 13 ಸಾವಿರ ಕೋಟಿ ಕಪ್ಪುಹಣವನ್ನು ಘೋಷಿಸಿಕೊಂಡಿದ್ದ ಅಂತ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com