ನೌಕಾ ಸೇನೆಯ ಗಮನ ಸೆಳೆಯುವಲ್ಲಿ ತೇಜಸ್ ವಿಫಲ; ಹೊಸ ಯುದ್ಧ ವಿಮಾನಕ್ಕೆ ಮತ್ತೆ ಶೋಧ!

ಭಾರಿ ನಿರೀಕ್ಷೆಗಳೊಂದಿಗೆ ತಯಾರಿಗಿದ್ದ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ಭಾರತೀಯ ನೌಕಾಸೇನೆಯ ಗಮನ ಸೆಳೆಯುವಲ್ಲಿ ವಿಫಲವಾಗಿದ್ದು, ಸೇನೆ ಸೇರ್ಪಡೆಗೆ ಇರಬೇಕಾದ ತಾಂತ್ರಿಕ ಸವಲತ್ತುಗಳು ತೇಜಸ್ ನಲ್ಲಿ ಇಲ್ಲ ಎಂದು ನೌಕಾ ಸೇನೆಯ ಅಧಿಕಾರಿಗಳು ಹೇಳಿದ್ದಾರೆ.
ತೇಜಸ್ ಮತ್ತು ಎಲ್ ಸಿಎ ಯುದ್ಧ ವಿಮಾನ
ತೇಜಸ್ ಮತ್ತು ಎಲ್ ಸಿಎ ಯುದ್ಧ ವಿಮಾನ

ನವದೆಹಲಿ: ಭಾರಿ ನಿರೀಕ್ಷೆಗಳೊಂದಿಗೆ ತಯಾರಿಗಿದ್ದ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ಭಾರತೀಯ ನೌಕಾಸೇನೆಯ ಗಮನ ಸೆಳೆಯುವಲ್ಲಿ ವಿಫಲವಾಗಿದ್ದು, ಸೇನೆ ಸೇರ್ಪಡೆಗೆ ಇರಬೇಕಾದ ತಾಂತ್ರಿಕ ಸವಲತ್ತುಗಳು  ತೇಜಸ್ ನಲ್ಲಿ ಇಲ್ಲ ಎಂದು ನೌಕಾ ಸೇನೆಯ ಅಧಿಕಾರಿಗಳು ಹೇಳಿದ್ದಾರೆ.

ಭಾರತೀಯ ನೌಕಾ ಸೇನೆಯಲ್ಲಿ ಸುಧೀರ್ಘವಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿಯಾಗಿದ್ದ ಮಿಗ್ 21 ಯುದ್ಧ ವಿಮಾನಗಳ ಬದಲಿಗೆ ಹೊಸ ಯುದ್ಧ ವಿಮಾನಗಳನ್ನು ಹೊಂದುವ ಹೆಬ್ಬಯಕೆ ಹೊಂದಿದ್ದ ನೌಕಾಪಡೆಗೆ ತೇಜಸ್ ನಿರಾಸೆ  ಮೂಡಿಸಿದ್ದು, ನೌಕಾಪಡೆ ಬಯಸಿದ್ದ ತಾಂತ್ರಿಕ ಲಕ್ಷಣಗಳನ್ನು ತೇಜಸ್ ಹೊಂದಿಲ್ಲ ಎಂದು ಅಧಿಕಾರಿಗಳು ತೇಜಸ್ ಯುದ್ಧ ವಿಮಾನವನ್ನು ತಿರಸ್ಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮಿಗ್ 21 ಯುದ್ಧ ವಿಮಾನ ನೇಪತ್ಯಕ್ಕೆ ಸರಿದ  ಬೆನ್ನಲ್ಲೇ ಸ್ವದೇಶಿ ಲುಘು ಯುದ್ಧ ವಿಮಾನ ತೇಜಸ್ ಆ ಜಾಗವನ್ನು ತುಂಬಬಹುದು ಎಂದು ಎಣಿಸಲಾಗಿತ್ತು. ಆದರೆ ತೇಜಸ್ ನೌಕಾಪಡೆಗೆ ಅಗತ್ಯವಿದ್ದ ಸಾಮರ್ಥ್ಯವನ್ನು ಹೊಂದಿಲ್ಲ ಎಂದು ನೌಕಾಪಡೆಯ ಅಧಿಕಾರಿಗಳು ಹೇಳಿದ್ದಾರೆ.

ಇದೇ ಕಾರಣಕ್ಕೆ ನೌಕಾಪಡೆಯ ಅಧಿಕಾರಿಗಳು ಮತ್ತೆರಡು ಹೊಸ ಯುದ್ಧ ವಿಮಾನಗಳಿಗಾಗಿ ಶೋಧ ನಡೆಸುತ್ತಿದ್ದಾರೆ. "ತೇಜಸ್ ಸ್ವದೇಶಿ ನಿರ್ಮಿತ ಯುದ್ಧ ವಿಮಾನವೇ ಆದರೂ ನೌಕಾಪಡೆ ನಿಗದಿಪಡಿಸಿದ್ದಕ್ಕಿಂತಲೂ ಹೆಚ್ಚು ತೂಕ  ಹೊಂದಿದೆ. ಹೀಗಾಗಿ ಈ ಯುದ್ಧ ವಿಮಾನವನ್ನು ಸಮರ ನೌಕೆಗಳಲ್ಲಿ ಬಳಕೆ ಮಾಡಲು ಸಾಧ್ಯವಿಲ್ಲ ಎಂದು ನೌಕ ದಳ ಮುಖ್ಯಸ್ಥ ಸುನಿಲ್ ಲಂಬಾ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಕನಸಿನ ಯೋಜನೆ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಸುಮಾರು 3,650 ಕೋಟಿ ರು ವೆಚ್ಚದಲ್ಲಿ ತೇಜಸ್ ಯುದ್ಧ ವಿಮಾನ ದೇಶೀಯವಾಗಿ ತಯಾರಾಗಿದ್ದು, ಇತ್ತೀಚೆಗೆ ಗೋವಾದಲ್ಲಿ ನಡೆದ ಪರೀಕ್ಷೆಯಲ್ಲಿ ಯಶಸ್ವಿ  ಹಾರಾಟ ನಡೆಸಿತ್ತು. ಇದೀಗ ಈ ಯುದ್ಧ ವಿಮಾನದ ಹೆಚ್ಚಿನ ತೂಕದಿಂದಾಗಿ ನೌಕಾಪಡೆ ಈ ವಿಮಾನಗಳ ಸೇರ್ಪಡೆಗೆ ಹಿಂದೇಟು ಹಾಕುತ್ತಿದೆ.

ವಿಮಾನಗಳನ್ನು ಅಪ್ ಗ್ರೇಡ್ ಮಾಡಿದರೆ ಮತ್ತೆ ಆಲೋಚಿಸುವೆವು ಎಂದ ನೌಕಾಪಡೆ
ಇದೇ ವೇಳೆ ಸ್ವದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನ ನಿರ್ಮಾಣ ಮಾಡಿದ ಡಿಆರ್ ಡಿಒ ಶ್ರಮವನ್ನು ಶ್ಲಾಘಿಸಿರುವ ಲಂಬಾ ಅವರು, ಅಪ್ ಗ್ರೇಡ್ ಮಾಡಿದರೆ ಈ ಯುದ್ಧ ವಿಮಾನಗಳನ್ನು ನೌಕಾಪಡೆಗೆ ಸೇರ್ಪಡೆಗೊಳಿಸುವ  ಕುರಿತು ಭವಿಷ್ಯದಲ್ಲಿ ಖಂಡಿತ ಚಿಂತನೆ ನಡೆಸುತ್ತೇವೆ ಎಂದು ಹೇಳಿದ್ದಾರೆ. ಆದರೆ ಪ್ರಸ್ತುತ ನೌಕಾಪಡೆಯ ಸೇರ್ಪಡೆಯಾಗುವ ಯುದ್ಧ ವಿಮಾನಗಳು ಉದ್ದೇಶಿತ ಸಾಮರ್ಥ್ಯವನ್ನು ಹೊಂದಿರಲೇಬೇಕು ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com