ಅಮೃತ್ ಸರದ ಸ್ವರ್ಣ ಮಂದಿರದಲ್ಲಿ ಲಂಗರ್ ಬಡಿಸಿದ ಮೊದಲ ಪ್ರಧಾನಿ ಮೋದಿ!

ಡಿ.3 ರಂದು ಅಮೃತ್ ಸರದ ಸ್ವರ್ಣ ಮಂದಿರ( ಗೋಲ್ಡನ್ ಟೆಂಪಲ್) ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅಲ್ಲಿ ನೆರೆದಿದ್ದ ಜನರಿಗೆ ಲಂಗರ್ ಬಡಿಸಿದ್ದಾರೆ.
ಅಮೃತ್ ಸರದ ಸ್ವರ್ಣ ಮಂದಿರದಲ್ಲಿ ಲಂಗರ್ ಬಡಿಸಿದ ಮೊದಲ ಪ್ರಧಾನಿ ಮೋದಿ!
ಅಮೃತ್ ಸರದ ಸ್ವರ್ಣ ಮಂದಿರದಲ್ಲಿ ಲಂಗರ್ ಬಡಿಸಿದ ಮೊದಲ ಪ್ರಧಾನಿ ಮೋದಿ!
ಅಮೃತ್ ಸರ: ಡಿ.3 ರಂದು ಅಮೃತ್ ಸರದ ಸ್ವರ್ಣ ಮಂದಿರ( ಗೋಲ್ಡನ್ ಟೆಂಪಲ್) ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅಲ್ಲಿ ನೆರೆದಿದ್ದ ಜನರಿಗೆ ಲಂಗರ್ ಬಡಿಸಿದ್ದಾರೆ. ಈ ಮೂಲಕ ಸ್ವರ್ಣ ಮಂದಿರದಲ್ಲಿ ಲಂಗರ್ (ಪ್ರಸಾದ) ವನ್ನು ಬಡಿಸಿದ ಮೊದಲ ಪ್ರಧಾನಿಯಾಗಿದ್ದಾರೆ ಮೋದಿ. 
ಪಂಜಾಬ್ ನ ಅಮೃತ್ ಸರದಲ್ಲಿ ಹಾರ್ಟ್ ಆಫ್ ಏಷ್ಯಾ ಸಮ್ಮೇಳನ ನಡೆಯುತ್ತಿದ್ದು, ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸಿದ್ದ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಅವರೊಂದಿಗೆ ಸ್ವರ್ಣ ಮಂದಿರ(ಗೋಲ್ಡನ್ ಟೆಂಪಲ್) ಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಭಕ್ತಾದಿಗಳಿಗೆ ಪ್ರಸಾದವನ್ನು ಸ್ವತಃ ಬಡಿಸಿ ಅಚ್ಚರಿ ಮೂಡಿಸಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೋಲ್ಡನ್ ಟೆಂಪಲ್ ನ ಮುಖ್ಯ ಮುಖ್ಯ ಮಾಹಿತಿ ಅಧಿಕಾರಿ ಗುರುಬಚನ್ ಸಿಂಗ್, ಸ್ವರ್ಣ ಮಂದಿರದಲ್ಲಿ ಭಕ್ತಾದಿಗಳಿಗೆ ಪ್ರಸಾದ ಬಡಿಸಿದ ಮೊದಲ ಪ್ರಧಾನಿ ಮೋದಿಯಾಗಿದ್ದಾರೆ ಎಂದು ಸಂಸತಸ ವ್ಯಕ್ತಪಡಿಸಿದ್ದಾರೆ. 
ಭಾರತದ ಎಲ್ಲಾ ಪ್ರಧಾನಿಗಳು ಗೋಲ್ಡನ್ ಟೆಂಪಲ್ ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರಂತೆ ಯಾರೂ ಸಹ ಭಕ್ತಾದಿಗಳಿಗೆ ಸ್ವತಃ ಪ್ರಸಾದವನ್ನು ಬಡಿಸಿರಲಿಲ್ಲ, ದೇವಾಲಯಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಏಕಾಏಕಿ ಬಡಿಸಲು ಪ್ರಾರಂಭಿಸಿದರು, ನಂತರ 40 ನಿಮಿಷಕ್ಕೂ ಹೆಚ್ಚು ಕಾಲ ಗೋಲ್ಡನ್ ಟೆಂಪಲ್ ನಲ್ಲೇ ಕಳೆದರು ಎಂದು ಗೋಲ್ಡನ್ ಟೆಂಪಲ್ ನ ಮುಖ್ಯ ಮಾಹಿತಿ ಅಧಿಕಾರಿ ಗುರುಬಚನ್ ಸಿಂಗ್ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com