
ನವದೆಹಲಿ: ರಾಷ್ಟ್ರೀಯ ನೌಕಾ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಭಾರತೀಯ ನೌಕಾ ಪಡೆಗೆ ಸೆಲ್ಯೂಟ್ ಹೊಡೆದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಶುಭಾಶಯಗಳನ್ನು ಕೋರಿದ್ದಾರೆ.
ಟ್ವಿಟರ್ ನಲ್ಲಿ ಶುಭಾಶಯ ಕೋರಿರುವ ಅವರು, ನೌಕಾ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಭಾರತೀಯ ನೌಕಾ ಪಡೆಗೆ ಹಾಗೂ ಅವರ ಕುಟುಂಬಸ್ಥರಿಗೆ ಈ ಮೂಲಕ ಶುಭಾಶಯಗಳನ್ನು ಕೋರುತ್ತಿದ್ದೇನೆ. ದೇಶದಲ್ಲಿ ನೌಕಾ ಪಡೆಯ ಪಾತ್ರ ಅತ್ಯಂತ ಮಹತ್ವವಾಗಿದ್ದು, ನಮ್ಮ ವೀರ ನೌಕಾ ಪಡೆಗಳಿಗೆ ಸೆಲ್ಯೂಟ್ ಹೊಡೆಯುತ್ತಿದ್ದೇನೆಂದು ಹೇಳಿದ್ದಾರೆ.
ರಾಷ್ಟ್ರೀಯ ನೌಕಾ ಪಡೆ ದಿನ ಹಿನ್ನಲೆಯಲ್ಲಿ ಭಾರತೀಯ ನೌಕಾ ಪಡೆದ ಮುಖ್ಯಸ್ಥ ಸುನಿಲ್ ಲಾನ್ಬಾ, ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಮತ್ತು ವಾಯುಪಡೆಯ ಮುಖ್ಯಸ್ಥ ಮಾರ್ಷನ್ ಅರುಪ್ ರಹಾ ಅವರು, ರಾಜಧಾನಿ ದೆಹಲಿಯಲ್ಲಿರುವ 'ಅಮರ್ ಜವಾನ್ ಜ್ಯೋತಿ' ಬಳಿ ತೆರಳಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
Advertisement