
ನವದೆಹಲಿ: ವಿಶ್ವದ ಘಟಾನುಘಟಿ ನಾಯಕರನ್ನು ಹಿಂದಿಕ್ಕಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಟೈಮ್ಸ್ ವರ್ಷದ ವ್ಯಕ್ತಿ 2016 ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದಕ್ಕೆ ಮೋದಿಯವರನ್ನು ಬಿಜೆಪಿ ನಾಯಕರು ಹಾಡಿ ಹೊಗಳುತ್ತಿದ್ದಾರೆ.
ಟೈಮ್ಸ್ ವರ್ಷದ ವ್ಯಕ್ತಿ 2016ರಲ್ಲಿ ಪ್ರಧಾನಿ ಮೋದಿಯವರು ಗೆಲವು ಸಾಧಿಸಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂಜ್ರ ಸಚಿವೆ ಉಮಾ ಭಾರತಿ ಅವರು, ಮೋದಿಯವರು ಕೇವಲ ವರ್ಷದ ವ್ಯಕ್ತಿಯಲ್ಲ. ಶಾಂತಿ, ಉದ್ಯೋಗ, ಸಮೃದ್ಧಿ, ಅಭಿವೃದ್ಧಿಯ ಮೂಲಕ ದೇಶದ ವ್ಯಕ್ತಿಯಾಗಿದ್ದಾರೆ. ಮುಂಬರುವ ವರ್ಷಗಳಲ್ಲಿ ಮೋದಿಯವರ ಸುತ್ತಲೂ ದೇಶ ಹಾಗೂ ವಿಶ್ವ ಸುತ್ತುವರೆದಿರುತ್ತದೆ ಎಂದು ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಮಾತನಾಡಿ, ಮೋದಿಯವರು ಟೈಮ್ಸ್ ವರ್ಷದ ವ್ಯಕ್ತಿಯಾಗಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ. ಮೋದಿಯವರಿಗೆ ಈ ಮೂಲಕ ಶುಭಾಶಯಗಳನ್ನು ಹೇಳುತ್ತೇನೆಂದು ಹೇಳಿದ್ದಾರೆ.
ಪ್ರಧಾನಿ ಮೋದಿಯವರ ಗೆಲುವಿಗೆ ಕಾಂಗ್ರೆಸ್ ಟೀಕೆ ವ್ಯಕ್ತಪಡಿಸಿದ್ದು, ಪ್ರಧಾನಿ ಮೋದಿಯವರಿಗೆ ಮತ ಹಾಕಿದ್ದ ಜನರಿಗೆ ಬೇಳೆ-ಕಾಳು, ಗೋಧಿಯ ಬೆಲೆ ಗೊತ್ತಿರಲಿಲ್ಲ. ನೋಟು ನಿಷೇಧದ ಬಳಿಕ ಇದೀಗ ಜನರು ಸಂಕಷ್ಟ ಎದುರಿಸುತ್ತಿದ್ದಾರೆಂದು ಹೇಳಿದೆ.
ಈ ಕುರಿತಂತೆ ಮಾಡನಾಡಿರುವ ಕಾಂಗ್ರೆಸ್ ನಾಯಕ ರಾಜ್ ಬಬ್ಬರ್ ಅವರು, ಮೋದಿಯವರು ಟೈಮ್ಸ್ ಸಮೀಕ್ಷೆಗೆ ಹೋಗಬಾರದಿತ್ತು. ಎರಡೂವರೆಗ ವರ್ಷಗಳಿಂದ ಪ್ರಧಾನಮಂತ್ರಿಯಾಗಿರುವ ಕಾರಣ ನೀವು ಜನಪ್ರಿಯತೆಯನ್ನು ಪಡೆದುಕೊಂಡಿದ್ದೀರ. ಇದನ್ನು ಮೋದಿಯವರು ಮರೆಯಬಾರದು ಎಂದು ಹೇಳಿದ್ದಾರೆ.
ಸಿಪಿಐ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಡಿ.ರಾಜಾ ಅವರು ಮಾತನಾಡಿ, ನೋಟು ನಿಷೇಧದಿಂದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಟೈಮ್ಸ್ ವರ್ಷದ ವ್ಯಕ್ತಿಯಾಗಿರುವುದಕ್ಕೆ ಪ್ರಧಾನಿ ಮೋದಿಯವರು ಸಂತಸದಿಂದ ಇರಬಹುದು. ದೇಶದ ಜನತೆ ನೀಡುತ್ತಿರುವ ಪ್ರಮಾಣಪತ್ರಕ್ಕೆ ಏನು ಹೇಳುತ್ತೀರಿ? ಎಂದು ಪ್ರಶ್ನಿಸಿದ್ದಾರೆ.
ಮಾಜಿ ಕೇಂದ್ರ ಸಚಿವೆ ರೇಣುಕಾ ಚೌದರಿ ಮಾತನಾಡಿ, ನೋಟು ನಿಷೇಧದಂತಹ ನಿರ್ಧಾರದಿಂದ ಪ್ರಧಾನಿ ಮೋದಿಯವರು ಜನರನ್ನು ಸಂಕಷ್ಟದ ಕೂಪಕ್ಕೆ ತಳ್ಳಿದ್ದಾರೆ. ಸಮೀಕ್ಷೆಯಲ್ಲಿ ಮೋದಿಯವರ ಗೆಲವು ಆಶ್ಚರ್ಯವೇನನ್ನೂ ತಂದಿಲ್ಲ ಎಂದು ಹೇಳಿದ್ದಾರೆ.
ಟೈಮ್ಸ್ ವರ್ಷದ ವ್ಯಕ್ತಿ 2016ಕ ಆನ್ ಲೈನ್ ಓದುಗರ ಮತ ಸಂಗ್ರಹಣೆಯಲ್ಲಿ ಶೇ.18 ಮತ ಪಡೆಯುವ ಮೂಲಕ ವಿಶ್ವದ ಘಟಾನುಘಟಿ ನಾಯಕರನ್ನು ಹಿಂದಿಕ್ಕಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗೆಲವು ಸಾಧಿಸಿದ್ದರು. ನಿನ್ನೆ ರಾತ್ರಿ ಮುಕ್ತಾಯವಾದ ಮತ ಸಂಗ್ರಹಣೆಯಲ್ಲಿ ಮೋದಿಯವರು ಒಟ್ಟು ಶೇ.18 ಮತ ಪಡೆಯುವ ಮೂಲಕ ಟೈಮ್ಸ್ ವರ್ಷದ ವ್ಯಕ್ತಿ ಪಟ್ಟಿಯಲ್ಲಿ ಮೋದಿಯವರು ಮೊದಲ ಸ್ಥಾನವನ್ನು ಪಡೆದುಕೊಂಡಿದ್ದರು.
Advertisement