ಪಾವತಿ ಸುದ್ದಿ ಪ್ರಸಾರದ ವಿರುದ್ಧ ಮಸೂದೆ: ಚುನಾವಣಾ ಆಯೋಗದ ಮನವಿಗೆ ಬಿಜೆಪಿ ಬೆಂಬಲ

ಪಾವತಿ ಸುದ್ದಿಗಳಿಗೆ ಕಡಿವಾಣ ಹಾಕಲು ಮಸೂದೆಯನ್ನು ರೂಪಿಸುವಂತೆ ಕೇಂದ್ರ ಚುನಾವಣಾ ಆಯೋಗ ಮಾಡಿರುವ ಮನವಿಗೆ ಬಿಜೆಪಿ ಗುರುವಾರ ಬೆಂಬಲವನ್ನು ಸೂಚಿಸಿದೆ...
ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ
ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ

ನವದೆಹಲಿ: ಪಾವತಿ ಸುದ್ದಿಗಳಿಗೆ ಕಡಿವಾಣ ಹಾಕಲು ಮಸೂದೆಯನ್ನು ರೂಪಿಸುವಂತೆ ಕೇಂದ್ರ ಚುನಾವಣಾ ಆಯೋಗ ಮಾಡಿರುವ ಮನವಿಗೆ ಬಿಜೆಪಿ ಗುರುವಾರ ಬೆಂಬಲವನ್ನು ಸೂಚಿಸಿದೆ.

ಈ ಕುರಿತಂತೆ ಮಾತನಾಡಿರುವ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು, ಚುನಾವಣೆ ವೇಳೆ ರಾಜಕೀಯ ಉದ್ದೇಶಕ್ಕೆ ಬಳಕೆ ಮಾಡುತ್ತೇವೆಂದು ಹೇಳಿ ಹಣವನ್ನು ದುರ್ಬಳಕೆ ಮಾಡಿಕೊಳ್ಳುವುದು ನಿಜಕ್ಕೂ ಗಂಭೀರವಾಗ ವಿಚಾರ. ಈ ರೀತಿ ಹಣದ ದುರ್ಬಳಕೆಯನ್ನು ಮಾಡಲಾಗುತ್ತದೆ. ಏಕೆಂದರೆ, ರಾಜಕೀಯ ಪಕ್ಷಗಳಿಗೆ ಸಾಕಷ್ಟು ತೆರಿಗೆ ವಿನಾಯಿತಿಗಳಿರುತ್ತವೆ. ಈ ರೀತಿಯ ಪ್ರಕರಣಗಳನ್ನು ತನಿಖೆ ನಡೆಸಬೇಕಾಗಿದೆ. ಪಾವತಿ ಸುದ್ದಿಗಳಿಗೆ ಕಡಿವಾಣ ಹಾಕಲು ಮಸೂದೆಯೊಂದನ್ನು ರೂಪಿಸುವಂತೆ ಚುನಾವಣಾ ಆಯೋಗ ಮಾಡಿರುವ ಮನವಿಗೆ ನಮ್ಮ ಬೆಂಬಲವಿದೆ ಎಂದು ಹೇಳಿದ್ದಾರೆ.

ಪಾವತಿ ಸುದ್ದಿಗಳನ್ನು ಗ್ರಾಹ್ಯ ಅಪರಾಧವನ್ನಾಗಿ ಮಾಡಲು ಕ್ರಮ ಕೈಗೊಳ್ಳಬೇಕೆಂದು ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಬಳಿ ಈ ಹಿಂದೆ ಮನವಿ ಮಾಡಿಕೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com