
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಮಹೇಶ್ ಶಾ ಅವರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಹೇಳಲಾಗುತ್ತಿದ್ದು, ಮಹೇಶ್ ಶಾ ಜೊತೆಗಿನ ಸಂಬಂಧವನ್ನು ಪ್ರಧಾನಿ ಮೋದಿಯವರು ಬಹಿರಂಗಪಡಿಸಬೇಕೆಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಗುರುವಾರ ಆಗ್ರಹಿಸಿದ್ದಾರೆ.
ಮಹೇಶ್ ಶಾ ಡಿಸೆಂಬರ್ 3 ರಂದು ಟಿವಿ ಚಾನೆಲ್ ವೊಂದರಲ್ಲಿ ಕೇಂದ್ರದ ಆದಾಯ ಘೋಷಣೆ ಯೋಜನೆಯಡಿಯಲ್ಲಿ ರು. 13,800 ಕೋಟಿ ಆದಾಯ ದಾಖಲೆಯನ್ನು ಪ್ರಕಟಿಸಿದ್ದರು.
ಪ್ರಕರಣ ಸಂಬಂಧ ಹೇಳಿಕೆ ನೀಡಿದ್ದ ಗುಜರಾತ್ ಮಾಜಿ ಸಿಎಂ ಮೆಹ್ತಾ ಅವರು ನರೇಂದ್ರ ಮೋದಿಯವರು ಗುಜರಾತ್ ನಲ್ಲಿ ಮುಖ್ಯಮಂತ್ರಿಯಾಗಿದ್ದ ಸಂಬಂದರ್ಶದಲ್ಲಿ ಉದ್ಯಮಿ ಮಹೇಶ್ ಶಾ ಅವರು, ಕಚೇರಿಯೊಳಗೆ ಮುಕ್ತವಾಗಿ ಪ್ರವೇಶ ಮಾಡುತ್ತಿದ್ದರು ಎಂದು ಹೇಳಿದ್ದರು.
ಈ ಎಲ್ಲಾ ಬೆಳವಣಿಗೆ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಜ್ರಿವಾಲ್ ಅವರು, ಮಹೇಶ್ ಶಾ ಅವರು ಅಮಿತ್ ಶಾ ಹಾಗೂ ಪ್ರಧಾನಿ ಮೋದಿಯವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಎಂದು ಗುಜರಾತ್ ಮಾಜಿ ಮುಖ್ಯಮಂತ್ರಿ ಸುರೇಶ್ ಮೆಹ್ತಾ ಅವರು ಹೇಳಿದ್ದಾರೆ, ಮಹೇಶ್ ಶಾ ನಡುವೆ ಇದ್ದ ಸಂಬಂಧದ ಕುರಿತಂತೆ ಪ್ರಧಾನಿ ಮೋದಿಯವರು ಕೂಡಲೇ ಜನರಿಗೆ ಸ್ಪಷ್ಟನೆ ನೀಡಬೇಕಿದೆ ಎಂದು ಹೇಳಿದ್ದಾರೆ.
ತಮ್ಮ ಆದಾಯಕ್ಕೆ ಕಾರಣರಾದ ವ್ಯಕ್ತಿಗಳ ಹೆಸರನ್ನು ಬಹಿರಂಗ ಪಡಿಸುತ್ತೇನೆಂದು ಮಹೇಶ್ ಶಾ ಹೇಳಿದ್ದರು. ಪ್ರಕರಣ ಬೆಳಕಿಗೆ ಬಂದು 1 ವಾರ ಕಳೆದಿದೆ. ಈ ವರೆಗೂ ಆದಾಯ ತೆರಿಗೆ ಇಲಾಖೆಯವರು ಮಹೇಶ್ ಶಾ ಅವರನ್ನು ವಿಚಾರಣೆ ನಡೆಸಿಲ್ಲ.
ದೇಶದಲ್ಲಿರುವ ಸಾರ್ವಜನಿಕರನ್ನು ಪ್ರಧಾನಿ ಮೋದಿಯವರು ಬ್ಯಾಂಕ್, ಎಟಿಎಂಗಳ ಮುಂದೆ ಸಾಲಿನಲ್ಲಿ ನಿಲ್ಲುವಂತೆ ಮಾಡಿದ್ದಾರೆ. ನಿಜವಾಗಿಯೂ ಕಪ್ಪುಹಣ ಇಟ್ಟುಕೊಂಡವರನ್ನೇಕೆ ಮೋದಿಯವರು ಪ್ರಶ್ನಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
Advertisement