
ನವದೆಹಲಿ: ಸಂಸತ್ತಿನಲ್ಲಿ ಕಲಾಪ ಆರಂಭವಾಗಿ ಮೂರು ವಾರ ಕಳೆದರೂ ನೋಟು ನಿಷೇಧ ನಿರ್ಧಾರ ಹಿಡಿದು ಕಲಾಪಕ್ಕೆ ಅಡ್ಡಿಯುಂಟು ಮಾಡುತ್ತಿರುವ ವಿರೋಧ ಪಕ್ಷಗಳ ವಿರುದ್ಧ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಗುರುವಾರ ಕಿಡಿಕಾರಿದ್ದಾರೆ.
ಲೋಕಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ನೋಟು ನಿಷೇಧ ಕುರಿತಂತೆ ವಿರೋಧ ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಆರಂಭಿಸಿದವು. ಈ ವೇಳೆ ಮಾತನಾಡಿದ ಜೇಟ್ಲಿಯವರು, ನೋಟು ನಿಷೇಧದಿಂದ ಎದುರಾಗಿರುವ ಅನಾನುಕೂಲತೆ ಕಡಿಮೆ ಮಾಡಲು ಸರ್ಕಾರ ಎಲ್ಲಾ ರೀತಿಯ ಕೆಲಸವನ್ನು ಮಾಡುತ್ತಿದೆ ಎಂದು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ ಅವರು, ಕಾಂಗ್ರೆಸ ಸರ್ಕಾರ 2004-14ರ ಅವಧಿಯವರೆಗೂ ದೇಶದಲ್ಲಿ ಅಧಿಕಾರ ನಡೆಸಿತ್ತು. ಅಂದರೆ, 10 ವರ್ಷಗಳ ಕಾಲ ಆಡಳಿತ ನಡೆಸಿತ್ತು. 10 ವರ್ಷದ ಆಡಳಿತಾವಧಿಯಲ್ಲಿ ಕಪ್ಪುಹಣದ ವಿರುದ್ಧ ಯಾವುದಾದರೂ ಒಂದು ನಿರ್ಧಾರವನ್ನಾಗಲಿ, ಕ್ರಮವನ್ನಾಗಲೀ ತೆಗೆದುಕೊಂಡಿದ್ದೀರಾ ಎಂದು ಪ್ರಶ್ನೆ ಹಾಕಿದರು.
Advertisement