ಅಂಡಮಾನ್ ನಲ್ಲಿ ಭಾರಿ ಮಳೆ; ಅಪಾಯದಲ್ಲಿ ಸಿಲುಕಿದ್ದ 2300ಕ್ಕೂ ಅಧಿಕ ಮಂದಿಯ ರಕ್ಷಣೆ

ಸತತ ಮಳೆ ಹಾಗೂ ಚಂಡ ಮಾರತದಿಂದಾಗಿ ನಲುಗಿ ಹೋಗಿರುವ ಅಂಡಮಾನ್ ನಿಕೋಬಾರ್ ದ್ವೀಪದ ಹ್ಯಾವ್ಲಾಕ್ ದ್ವೀಪದಿಂದ ಸುಮಾರು 2300ಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಪೋರ್ಟ್ ಬ್ಲೇರ್: ಸತತ ಮಳೆ ಹಾಗೂ ಚಂಡ ಮಾರತದಿಂದಾಗಿ ನಲುಗಿ ಹೋಗಿರುವ ಅಂಡಮಾನ್ ನಿಕೋಬಾರ್ ದ್ವೀಪದ ಹ್ಯಾವ್ಲಾಕ್ ದ್ವೀಪದಿಂದ ಸುಮಾರು 2300ಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದೆ ಎಂದು  ತಿಳಿದುಬಂದಿದೆ.

25ಕ್ಕೂ ಹೆಚ್ಚು ವಿದೇಶಿಗರು ಸೇರಿದಂತೆ ಅಂಡಮಾನ್ ನ ಹ್ಯಾವ್ಲಾಕ್ ಮತ್ತು ನೀಲ್ ದ್ವೀಪಗಳಲ್ಲಿ ಅಪಾಯಕ್ಕೆ ಸಿಲುಕಿದ್ದ ಸುಮಾರು 2300ಕ್ಕೂ ಅಧಿಕ ಮಂದಿಯನ್ನು ಭಾರತೀಯ ಸೇನೆಯ ಬಿಟ್ರಾ, ಬಂಗಾರಂ, ಕುಂಭೀರ್ ಮತ್ತು ಎಲ್  ಸಿಯು 38 ನೌಕೆಗಳು ರಕ್ಷಿಸಿ ಪೋರ್ಟ್ ಬ್ಲೇರ್ ಗೆ ಸುರಕ್ಷಿತವಾರಿ ರವಾನಿಸಿದೆ. ಈ 2300 ಮಂದಿಯ ಪೈಕಿ ಹಲವು ವಿದೇಶಿಗರಿದ್ದು, ಸ್ಪೈನ್, ಜರ್ಮನಿ, ಇಟಲಿ, ಲಟ್ವಿಯಾ, ಇಸ್ರೇಲ್ ಮತ್ತು ಐರ್ಲೆಂಡ್ ಮೂಲದವರು ಎಂದು  ತಿಳಿದುಬಂದಿದೆ. ಪ್ರವಾಸಕ್ಕೆಂದು ಆಗಮಿಸಿದ್ದ ಇವರು ವರ್ದಾ ಚಂಡಮಾರುತದಿಂದಾಗಿ ಹ್ಯಾವ್ಲಾಕ್ ಮತ್ತು ನೀಲ್ ದ್ವೀಪಗಳಲ್ಲಿ ಅಪಾಯಕ್ಕೆ ಸಿಲುಕಿದ್ದರು.

ರಕ್ಷಣಾ ಕಾರ್ಯಾಚರಣೆಗಾಗಿ  ಭಾರತೀಯ ಸೇನೆಯ ಬಿಟ್ರಾ, ಬಂಗಾರಂ, ಕುಂಭೀರ್ ಮತ್ತು ಎಲ್ ಸಿಯು 38 ನೌಕೆಗಳಲ್ಲದೇ ಹೆಚ್ಚುವರಿಯಾಗಿ ಕರಾವಳಿ ರಕ್ಷಣಾ ಪಡೆಯ ಎರಡು ಹಡಗಳು ಗಳನ್ನು ಬಳಕೆ ಮಾಡಿಕೊಂಡಿದ್ದು,  ಇದಲ್ಲದೇ ಭಾರತೀಯ ವಾಯು ಸೇನೆಯ ಎಂಐ17v5 ಹೆಲಿಕಾಪ್ಟರ್ ಗಳನ್ನು ಕೂಡ ಬಳಕೆ ಮಾಡಿಕೊಳ್ಳಲಾಗಿತ್ತು. ದ್ವೀಪದಲ್ಲಿ ಮತ್ತಷ್ಟು ಮಂದಿ ಅಪಾಯಕ್ಕೆ ಸಿಲುಕಿರುವ ಶಂಕೆ ಇದ್ದು ಅವರನ್ನೂ ಕೂಡ ರಕ್ಷಣೆ ಮಾಡಲಾಗುತ್ತದೆ  ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆಗೆ ಭಾರಿ ಮಳೆ ನಡುವೆ ವರ್ದಾ ಚಂಡಮಾರುತ ಅಡ್ಡಿಯಾಗಿದ್ದು ಪ್ರತೀಕೂಲ ವಾತಾವರಣದ ನಡುವೆಯೇ ಸೇನೆ ರಕ್ಷಣಾ ಕಾರ್ಯಾಚರಣೆಯ ಸಾಹಸಕ್ಕೆ ಕೈಹಾಕಿದೆ. ನಿನ್ನೆ ಒಂದೇ ದಿನದಲ್ಲಿ ಸೇನಾ  ಹೆಲಿಕಾಪ್ಟರ್ ಗಳು ಒಟ್ಟು 14 ಬಾರಿ ಅಪಾಯಕ್ಕೆ ಸಿಲುಕಿದ್ದವರನ್ನು ರಕ್ಷಿಸಿತ್ತು. ಈ ಪೈಕಿ ಹ್ಯಾವ್ಲಾಕ್ ಗೆ 11 ಬಾರಿ ಮತ್ತು ನೀಲ್ ದ್ವೀಪಕ್ಕೆ 3 ಬಾರಿ ಪ್ರಯಾಣಿಸಿತ್ತು.

ಸುಮಾರು 60ಕ್ಕೂ ಹೆಚ್ಚು ಮಂದಿ ಯೋಧರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಲಿದ್ದು, ದ್ವೀಪಗಳಲ್ಲಿರುವ ಎಲ್ಲ ಪ್ರವಾಸಿಗರನ್ನು ಸುರಕ್ಷಿತವಾಗಿ ವಾಪಸ್ ಕರೆತರಲಿದ್ದಾರೆ. ಅಂಡಮಾನ್  ದ್ವೀಪಸಮೂಹಗಳಲ್ಲೇ ಹ್ಯಾವ್ಲಾಕ್ ದ್ವೀಪ  ಅತ್ಯಂತ ಸುಂದರ ಮತ್ತು ವಿಶಾಲ ದ್ವೀಪವಾಗಿದ್ದು, ದ್ವೀಪದಲ್ಲಿನ ಬೀಚ್ ಹಾಗೂ ಪ್ರಕೃತಿ ಸೌಂದರ್ಯ ನೋಡಲು ನಿತ್ಯ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ರಾಜಧಾನಿ ಪೋರ್ಟ್  ಬ್ಲೇರ್ ನಿಂದ ಈ ದ್ವೀಪ ಸುಮಾರು 40 ಕಿ.ಮೀ ದೂರದಲ್ಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com