
ನವದೆಹಲಿ: ದೆಹಲಿ ಅಪರಾಧ ವಿಭಾಗದ ಪೊಲೀಸರು ಗ್ರೇಟರ್ ಕೈಲಾಶ್ ಪ್ರದೇಶದಲ್ಲಿ ಸುಮಾರು 13.65 ಕೋಟಿ ರು ಹಣ ವಶ ಪಡಿಸಿಕೊಂಡಿದ್ದಾರೆ.
13.65 ಕೋಟಿ ರು ಹಣದಲ್ಲಿ 2.60 ಕೋಟಿ ಹಣ 2ಸಾವಿರ ರು ಮುಖಬೆಲೆಯ ಹೊಸ ನೋಟುಗಳಾಗಿವೆ. ಟಿ ಅಂಡ್ ಟಿ ಕಾನೂನು ಸಂಸ್ಥೆಯಲ್ಲಿ ವಶ ಪಡಿಸಿಕೊಂಡ ಹಣವನ್ನು ದೆಹಲಿ ಕ್ರೈಮ್ ಬ್ರಾಂಚ್ ಪೊಲೀಸರು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಡಿ.10ರಂದು ಕರ್ನಾಟಕದ ಹುಬ್ಬಳ್ಳಿ-ಚಿತ್ರದುರ್ಗದಲ್ಲಿ ಐಟಿ ದಾಳಿ ರಹಸ್ಯ ಕೋಣೆಯಲ್ಲಿ ಬಚ್ಚಿಟ್ಟಿದ್ದ 5.7 ಕೋಟಿ ನಗದು ಮತ್ತು 24 ಕೆಜಿ ಚಿನ್ನದ ಗಟ್ಟಿ, 4 ಕೆಜಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಇನ್ನು ತಮಿಳು ನಾಡಿನಲ್ಲೂ ಕೂಡ ಐಟಿ ಅಧಿಕಾರಿಗಳು ಭಾರೀ ಪ್ರಮಾಣದ ನಗದು ಹಾಗೂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
Advertisement