ಜಗದ್ಗುರು ಶಂಕರಾಚಾರ್ಯ ಸ್ವಾಮಿ ನರೇಂದ್ರಾನಂದ ಸರಸ್ವತಿ
ದೇಶ
ಸಂಸತ್ತು ಕಲಾಪಕ್ಕೆ ಅಡ್ಡಿಪಡಿಸುವ ಸಂಸದರ ವೇತನ ಕಡಿತಗೊಳಿಸಿ: ಕಾಶಿ ಶಂಕರಾಚಾರ್ಯ
ಕಾಶಿ ಸುಮೇರು ಪೀಠಾಧೀಶ್ವರ ಜಗದ್ಗುರು ಶಂಕಾರಾಚಾರ್ಯ ಸ್ವಾಮಿ ನರೇಂದ್ರಾನಂದ ಸರಸ್ವತಿಯವರು...
ಥಾಣೆ: ಕಾಶಿ ಸುಮೇರು ಪೀಠಾಧೀಶ್ವರ ಜಗದ್ಗುರು ಶಂಕಾರಾಚಾರ್ಯ ಸ್ವಾಮಿ ನರೇಂದ್ರಾನಂದ ಸರಸ್ವತಿಯವರು ಮುಕ್ತವಾಗಿ ನರೇಂದ್ರ ಮೋದಿ ಸರ್ಕಾರದ ಅಧಿಕ ಮೌಲ್ಯದ ನೋಟುಗಳ ಅಮಾನ್ಯತೆ ಕ್ರಮವನ್ನು ಸ್ವಾಗತಿಸಿದ್ದಾರೆ. ಆದರೆ ಈ ವಿಷಯದಲ್ಲಿ ಸಂಸತ್ತು ಕಲಾಪಕ್ಕೆ ಅಡ್ಡಿಪಡಿಸುತ್ತಿರುವ ಸಂಸದರ ಬಗ್ಗೆ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಸಂಸತ್ತು ಕಲಾಪಕ್ಕೆ ಅಡ್ಡಿಪಡಿಸುವವರ ವಿರುದ್ಧ ಸರ್ಕಾರ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ, ಅಂತಹ ಸಂಸದರ ವಿರುದ್ಧ ಏಕೆ ಕಾನೂನು ಕ್ರಮ ಕೈಗೊಳ್ಳಬಾರದು ಎಂದು ಸುಮೇರು ಶ್ರೀಗಳು ಪ್ರಶ್ನಿಸಿದ್ದಾರೆ.
ಕಲಾಪಕ್ಕೆ ಅಡ್ಡಿಪಡಿಸುವ ಸಂಸದರಿಗೆ ವೇತನ ನೀಡಬಾರದು. ಅವರಿಗೆ ನೀಡುವ ಭತ್ಯೆಗಳನ್ನು ಆ ಸಮಯಗಳಲ್ಲಿ ಕಡಿತ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇಲ್ಲಿನ ಮನೋರಮ ನಗರದಲ್ಲಿ ನಡೆಯುತ್ತಿರುವ 45 ದಿನಗಳ ಸಿದ್ದೇಶ್ವರ ದೇವಸ್ಥಾನದ ಹವನದ ಸಂದರ್ಭದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡುವಾಗ ಹೀಗೆ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ