ಸಾಂಬಾದಲ್ಲಿ ಮಾಜಿ ಪಾಕ್ ಸೈನಿಕನನ್ನು ಬಂಧಿಸಿದ ಭಾರತೀಯ ಸೇನೆ

ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ಮಾಜಿ ಪಾಕಿಸ್ತಾನ ಸೈನಿಕನನ್ನು ಭಾರತೀಯ...
ಬಿಎಸ್ಎಫ್
ಬಿಎಸ್ಎಫ್
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ಮಾಜಿ ಪಾಕಿಸ್ತಾನ ಸೈನಿಕನನ್ನು ಭಾರತೀಯ ಸೇನೆಯ ಯೋಧರು ಬಂಧಿಸಿದ್ದಾರೆ. 
ಕಳೆದ ರಾತ್ರಿ ಗಡಿಯಲ್ಲಿ ಅಕ್ರಮವಾಗಿ ಒಳನುಸುಳುತ್ತಿದ್ದ ವ್ಯಕ್ತಿಯೊರ್ವನನ್ನು ಯೋಧರು ಬಂಧಿಸಿದ್ದು ಆತನ ವಿಚಾರಣೆ ವೇಳೆ 65 ವರ್ಷದ ಮೊಹಮ್ಮದ್ ಎಂದು ತಿಳಿದುಬಂದಿದ್ದು ಆತ ಪಾಕಿಸ್ತಾನದ ಮಾಜಿ ಸೈನಿಕ ಎಂದು ಹೇಳಿಕೊಂಡಿರುವುದಾಗಿ ಬಿಎಸ್ಎಫ್ ಅಧಿಕಾರಿಗಳು ತಿಳಿಸಿದ್ದಾರೆ. 
ನಿನ್ನೆ ಸಂಜೆ ರಾಮಗಢ ಸೆಕ್ಟರ್ ಬಳಿ ಪಾಕಿಸ್ತಾನದ ಕಡೆ ಅನುಮಾನಾಸ್ಪದ ಚಟುವಟಿಕೆಗಳು ನಡೆದಿದ್ದನ್ನು ಬಿಎಸ್ಎಫ್ ಯೋಧರು ಗಮನಿಸಿದ್ದು ಹಲವು ಸುತ್ತು ಗುಂಡಿನ ದಾಳಿ ನಡೆಸಿದ್ದಾಗಿ ಬಿಎಸ್ಎಫ್ ಅಧಿಕಾರಿಗಳು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com