ಜಯಲಲಿತಾ ಸಾವಿನ ಬಗ್ಗೆ ಶ್ವೇತ ಪತ್ರ ಹೊರಡಿಸಿ: ಎಂಕೆ ಸ್ಟಾಲಿನ್ ಆಗ್ರಹ

ತಮಿಳುನಾಡು ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ಅದರಲ್ಲೂ ವಿಶೇಷವಾಗಿ ಅವರ ಕೊನೆಯ ದಿನಗಳ ಬಗ್ಗೆ ಹಾಗೂ ಚಿಕಿತ್ಸೆ ಬಗ್...
ಜಯಲಲಿತಾ
ಜಯಲಲಿತಾ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ಅದರಲ್ಲೂ ವಿಶೇಷವಾಗಿ ಅವರ ಕೊನೆಯ ದಿನಗಳ ಬಗ್ಗೆ ಹಾಗೂ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಬೇಕು ಎಂದ ಡಿಎಂಕೆ ಮಖಂಡ ಸ್ಟಾಲಿನ್ ಆಗ್ರಹಿಸಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಜಯಲಲಿತಾ ಅವರ ಆರೋಗ್ಯ ಹಾಗೂ ಸಾವಿನ ಬಗ್ಗೆ  ಜೊತೆಗೆ ಅಪೊಲೋ ಆಸ್ಪತ್ರೆ ನೀಡಿರುವ ಚಿಕಿತ್ಸೆ ಯ ವಿವರವನ್ನೊಳಗೊಂಡ ಶ್ವೇತ ಪತ್ರ ಹೊರಡಿಸಬೇಕು ಎಂದು ಸ್ಟಾಲಿನ್  ಹೇಳಿದ್ದಾರೆ.

ಚೆನ್ನೈ ನ ಎನ್ ಜಿಓ ಸಂಸ್ಥೆಯೊಂದು ಜಯಲಲಿತಾ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ನಲ್ಲಿ  ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಸ್ಟಾಲಿನ್ ಶ್ವೇತ ಪತ್ರ ಹೊರಡಿಸುವಂತೆ ಆಗ್ರಹಿಸಿದ್ದಾರೆ.

ಸೆಪ್ಟಂಬರ್ 22 ರಂದು ಅಪೊಲೋ ಆಸ್ಪತ್ರೆಗೆ ಜಯಲಲಿತಾ ದಾಖಲಾದ
ಮೇಲೆ ನೀಡಿದ ಚಿಕಿತ್ಸೆ ಸಂಬಂಧ ವೈದ್ಯಕೀಯ ದಾಖಲೆಗಳನ್ನು ನೀಡಬೇಕು ಎಂದು ಪಿಐಎಲ್ ನಲ್ಲಿ ತಿಳಿಸಲಾಗಿದೆ.

ಅಪೋಲೋ ಆಸ್ಪತ್ರೆಯ ಎರಡನೇ ಮಹಡಿಯಲ್ಲಿ  ದಾಖಲಾಗಿದ್ದ ಜಯಲಲಿತಾ ಅವರ ಆರೋಗ್ಯದ ಬಗ್ಗೆ ಸರ್ಕಾರ ಯಾವುದೇ ಮಾಹಿತಿ ನೀಡರಲಿಲ್ಲ. ಆಯ್ದ ಕೆಲವರನ್ನು ಬಿಟ್ಟರೇ ಯಾರಿಗೂ ಆಸ್ಪತ್ರೆ ಒಳಗೆ ಪ್ರವೇಶವಿರಲಿಲ್ಲ. ಇದು ಹಲವು ಅಮನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com