
ನವದೆಹಲಿ: ಸಂಗ್ರಹ ಮಾಡಲಾಗಿರುವ ಕಪ್ಪಹಣವನ್ನು ಬಡವರ ಖಾತೆಗಳಿಗೆ ಜಮಾ ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿಯವರು ಗುರುವಾರ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ದುಬಾರಿ ನೋಟಿನ ಮೇಲೆ ನಿಷೇದ ಹೇರಿ 37 ದಿನಗಳು ಕಳೆದಿವೆ. ಆದರೂ ಈಗಲೂ ಜನರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರ ಮೊದಲು ರೈತಲ ಸಾಲವನ್ನು ಮನ್ನಾ ಮಾಡೇಬೇಕಿದ್ದು, ಉದ್ಯಮಿಗಳ ಹೊಟ್ಟೆ ತುಂಬಿಸುವುದನ್ನು ನಿಲ್ಲಿಸೇಬೇಕಿದೆ ಮತ್ತು ಸಂಗ್ರಹ ಮಾಡಲಾಗಿರುವ ಕಪ್ಪುಹಣವನ್ನು ಬಡವರ ಖಾತೆಗಳಿಗೆ ಜಮಾ ಮಾಡಬೇಕಿದೆ ಎಂದು ಹೇಳಿದ್ದಾರೆ.
ಸರ್ಕಾರ ನೋಟು ನಿಷೇಧ ನಿರ್ಧಾರ ತೆಗೆದುಕೊಂಡಾಗಿನಿಂದಲೂ, ಸರ್ಕಾರದ ನಿರ್ಧಾರ ರೈತರ ಮೇಲೆ ಗಂಭೀರವಾದ ಪರಿಣಾಮ ಬೀರಿದೆ ಎಂಬ ವರದಿಗಳು ಬರುತ್ತಲೇ ಇವೆ. ನಿರ್ಧಾರ ತೆಗೆದುಕೊಂಡು 37 ದಿನಗಳು ಕಳೆದರೂ ಬಡವರು, ಕಾರ್ಮಿಕರು ಹಾಗೂ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದಿದ್ದಾರೆ.
ಇದೇ ವೇಳೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಉತ್ತರ ಪ್ರದೇಶದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದು, ಎಲ್ಲಿ ಸೋಲು ಕಾಣುತ್ತೀವೋ ಎಂಬ ಭಯದಿಂದ ಮೋದಿ ರು.500 ಹಾಗೂ 1,000 ನೋಟುಗಳ ಮೇಲೆ ನಿಷೇಧ ಹೇರಿದ್ದಾರೆ ಎಂದು ತಿಳಿಸಿದ್ದಾರೆ.
ಈ ಮೊದಲಿನಿಂದಲೂ ನಾವು ಕಪ್ಪುಹಣ ಹಾಗೂ ಭ್ರಷ್ಟಾಚಾರದ ವಿರುದ್ಧ ಇದ್ದೇವೆ. ಆದರೆ, ಕೇಂದ್ರ ಯಾವುದೇ ಅಭಿಪ್ರಾಯ ಹಾಗೂ ಸಲಹೆಗಳನ್ನು ಕೇಳದೆಯೇ ನಿರ್ಧಾರವನ್ನು ತೆಗೆದುಕೊಂಡಿದೆ. ಕೇಂದ್ರ ಸರ್ಕಾರ ನಿರ್ಧಾರ ಕಪ್ಪುಹಣದ ವಿರುದ್ಧ ತೆಗೆದುಕೊಂಡ ನಿರ್ಧಾರವಲ್ಲ. ಚುನಾವಣೆಯಲ್ಲಿ ಎಲ್ಲಿ ಸೋಲು ಕಾಣುತ್ತೀವೋ ಎಂಬ ಭಯದಿಂದ ನಿರ್ಧಾರ ತೆಗೆದುಕೊಂಡಿದ್ದಾರೆಂದು ಹೇಳಿದ್ದಾರೆ.
Advertisement