ರಾಹುಲ್ ಗಾಂಧಿಯನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ: ಶಿವರಾಜ್ ಸಿಂಗ್ ಚೌಹಾಣ್

ರಾಹುಲ್ ಗಾಂಧಿಯನ್ನು ನೋಡಿದರೆ ಪಾಪ ಎನಿಸುತ್ತದೆ, ದೇಶದ ಜನತೆ ರಾಹುಲ್ ನನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಹಾಗೂ ಅವರನ್ನು ನಂಬುವುದಿಲ್ಲ. ಹೀಗಾಗಿ ಅವರ ಹೇಳಿಕೆಗೆ ಅನಗತ್ಯವಾಗಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್...
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್

ಬಿಹಾರ: ರಾಹುಲ್ ಗಾಂಧಿಯನ್ನು ನೋಡಿದರೆ ಪಾಪ ಎನಿಸುತ್ತದೆ, ದೇಶದ ಜನತೆ ರಾಹುಲ್ ನನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಹಾಗೂ ಅವರನ್ನು ನಂಬುವುದಿಲ್ಲ. ಹೀಗಾಗಿ ಅವರ ಹೇಳಿಕೆಗೆ ಅನಗತ್ಯವಾಗಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಗುರುವಾರ ಹೇಳಿದ್ದಾರೆ.

ನಿನ್ನೆಯಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿರುದ್ಧ ಗಂಭೀರವಾದ ಆರೋಪ ಮಾಡಿದ್ದ ರಾಹುಲ್ ಗಾಂಧಿಯವರು, ಮೋದಿಯವರು ಖುದ್ದು ಭ್ರಷ್ಟರಾಗಿದ್ದು, ಈ ಬಗ್ಗೆ ನನ್ನ ಬಳಿ ಸಾಕ್ಷ್ಯಾಧಾರಗಳಿವೆ. ಒಮ್ಮೆ ಸಂಸತ್ತಿನಲ್ಲಿ ನಾನು ಮಾತನಾಡಲು ಆರಂಭಿಸಿದರೆ ಮೋದಿಯವರು ಕುಳಿತುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿಯೇ ಸಂಸತ್ತಿಗೆ ಬರಲು ಮೋದಿ ಹೆದರುತ್ತಿದ್ದಾರೆಂದು ಆರೋಪಿಸಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಚೌಹಾಣ್ ಅವರು, ರಾಹುಲ್ ಗಾಂಧಿಯವರನ್ನು ನೋಡಿದರೆ ಪಾಪ ಎನಿಸುತ್ತದೆ. ರಾಹುಲ್ ನನ್ನು ದೇಶದ ಜನತೆ ಗಂಭೀರವಾಗಿ ಪರಿಗಣಿಸುವುದಿಲ್ಲ. ಅವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ರಾಹುಲ್ ಮಾತನ್ನು ಯಾರೂ ನಂಬುವುದಿಲ್ಲ. ಹೀಗಾಗಿ ರಾಹುಲ್ ಹೇಳಿಕೆ ಕುರಿತಂತೆ ಯಾವ ಪ್ರತಿಕ್ರಿಯೆಯನ್ನು ನೀಡಲಿ ಎಂದು ಪ್ರಶ್ನಿಸಿದ್ದಾರೆ.

ಪ್ರಧಾನಿ ಮೋದಿಯವರು ಯುಗಪುರುಷರಾಗಿಗ್ದು, ನಿಷ್ಕಾಮ ಕರ್ಮಯೋಗಿ ಹಾಗೂ ದೇಶಭಕ್ತರಾಗಿದ್ದಾರೆ. ದೇಶದ ಅಭಿವೃದ್ಧಿ ಹಾಗೂ ದೇಶದ ಕಲ್ಯಾಣ ಬಿಟ್ಟು ಬೇರಾವುದನ್ನೂ ಅವರು ಆಲೋಚಿಸುವುದಿಲ್ಲ. ಅವರ ವ್ಯಕ್ತಿತ್ವ ಅಗಾಧವಾದುದು. ಅವರ ಕಾರ್ಯ ವೈಖರಿಯನ್ನು ನೋಡಿ ಇಡೀ ದೇಶವೇ ಅವರನ್ನು ಕಣ್ಣು ಮುಚ್ಚಿ ನಂಬುತ್ತದೆ. ಇದು ರಾಹುಲ್ ಗಾಂಧಿಗೆ ನೋವುಂಟು ಮಾಡುತ್ತಿದೆ. ಎಂದು ಹೇಳಿದ್ದಾರೆ.

ಮೋದಿಯವರು ಇಷ್ಟೊಂದು ಅದ್ಭುತ ಕಾರ್ಯಗಳನ್ನು ನೋಡಿ ರಾಹುಲ್ ಗೆ ನಂಬಲು ಸಾಧ್ಯವಾಗತ್ತಿಲ್ಲ. ಹೀಗಾಗಿಯೇ ಅವರ ಮೇಲೆ ದಾಳಿ ಮಾಡುತ್ತಿದ್ದಾರೆ. ಆದರೆ, ರಾಹುಲ್ ನನ್ನು ಯಾರೂ ನಂಬುವುದಿಲ್ಲ. ರಾಹುಲ್ ಅವರದ್ದು ಉತ್ತರ ಹಾಗೂ ಪ್ರತಿಕ್ರಿಯೆ ನೀಡುವಂತಹ ಹೇಳಿಕೆಯಲ್ಲ. ಮೋದಿಯವರು ಎಂದಿಗೂ ಮೋದಿಯೇ ಅವರಿಗೆ ಸಾಟಿಯಿಲ್ಲ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com