ನೋಟು ನಿಷೇಧ: ರಾಷ್ಟ್ರಪತಿ ಭೇಟಿ ಮಾಡಲು ವಿರೋಧ ಪಕ್ಷಗಳ ನಿರ್ಧಾರ

ದುಬಾರಿ ನೋಟು ಮೇಲಿನ ನಿಷೇಧ ಹೇರಿಕೆ ಕುರಿತಂತೆ ಆಡಳಿತಾರೂಢ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸುತ್ತಿರುವ ವಿರೋಧ ಪಕ್ಷಗಳು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರನ್ನು ಭೇಟಿಯಾಗಲು ಗುರುವಾರ ತೀರ್ಮಾನಿಸಿವೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನವದೆಹಲಿ: ದುಬಾರಿ ನೋಟು ಮೇಲಿನ ನಿಷೇಧ ಹೇರಿಕೆ ಕುರಿತಂತೆ ಆಡಳಿತಾರೂಢ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸುತ್ತಿರುವ ವಿರೋಧ ಪಕ್ಷಗಳು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರನ್ನು ಭೇಟಿಯಾಗಲು ಗುರುವಾರ ತೀರ್ಮಾನಿಸಿವೆ ಎಂದು ತಿಳಿದುಬಂದಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಳೆದ ನವೆಂಬರ್ ತಿಂಗಳಲ್ಲಿನ ರು.500 ಹಾಗೂ 1,000 ಮುಖಬೆಲೆಯ ದುಬಾರಿ ನೋಟುಗಳ ಮೇಲೆ ನಿಷೇಧ ಹೇರಿದ್ದರು. ನೋಟಿನ ಮೇಲೆ ನಿಷೇಧ ಹೇರಿದ್ದಾಗಿನಿಂದಲೂ ಸಾರ್ವಜನಿಕರು ಸಾಕಷ್ಟು ಸಂಕಷ್ಟವನ್ನು ಎದುರಿಸುತ್ತಿದ್ದಾರೆಂದು ಆರೋಪಿಸಿರುವ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಕೈಜೋಡಿಸಿ ಪ್ರತಿಭಟನೆಗಳನ್ನು ನಡೆಸುತ್ತಿವೆ.

ಇದಲ್ಲದೆ, ನೋಟು ನಿಷೇಧ ಕುರಿತಂತೆ ಸುಪ್ರೀಂಕೋರ್ಟ್ ನಲ್ಲಯೂ ಸಾಕಷ್ಟು ಅರ್ಜಿಗಳು ದಾಖಲಾಗಿವೆ. ಅರ್ಜಿಗಳನ್ನು ಪರಿಗಣಿಸಿರುವ ಸುಪ್ರೀಂಕೋರ್ಟ್ ಕೂಡ ನೋಟು ನಿಷೇಧ ಕುರಿತಂತೆ ಕೇಂದ್ರ ಬಳಿ ಸ್ಪಷ್ಟನೆಯನ್ನು ಕೇಳಿತ್ತು.

ಇದಕ್ಕೆ ಅಫಿಡವಿಟ್ ಸಲ್ಲಿಸಿದ್ದ ಕೇಂದ್ರ, ಅಕ್ರಮ ಹಣ ಹಾಗೂ ನಗದು ರಹಿತ ದೇಶವನ್ನಾಗಿ ಮಾರ್ಪಡಿಸುವ ಸಲುವಾಗಿ ಸರ್ಕಾರ ದುಬಾರಿ ನೋಟಿನ ಮೇಲೆ ನಿಷೇಧ ಹೇರಿತ್ತು ಎಂದು ತಿಳಿಸಿತ್ತು.

ಈ ಎಲ್ಲಾ ಬೆಳವಣಿಗಳ ಬೆನ್ನಲ್ಲೇ ಇದೀಗ ವಿರೋಧ ಪಕ್ಷಗಳು ರಾಷ್ಟ್ರಪತಿಗಳನ್ನು ಭೇಟಿ ಮಾಡಲು ತೀರ್ಮಾನಿಸಿದ್ದು, ನೋಟು ನಿಷೇಧ ಕುರಿತಂತೆ ಸಂಸತ್ತಿನಲ್ಲಿ ಚರ್ಚೆ ನಡೆಸಲು ಆಡಳಿತಾರೂಢ ಸರ್ಕಾರ ಅವಕಾಶ ಮಾಡಿಕೊಡುತ್ತಿಲ್ಲ ಎಂದು ದೂರು ನೀಡಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com