
ನ್ಯೂಯಾರ್ಕ್: ಪ್ರತಿಷ್ಠಿತ ಫೋರ್ಬ್ಸ್ ಪತ್ರಿಕೆ 2016ರ ವಿಶ್ವದ ಪ್ರಭಾವಿ ವ್ಯಕ್ತಿಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ಥಾನ ಪಡೆದುಕೊಂಡಿದ್ದಾರೆ.
ವಿಶ್ವದ ಅತ್ಯಂತ ಪ್ರಭಾವಿ 10 ಜನರಲ್ಲಿ ಪ್ರಧಾನಿ ಮೋದಿ ಒಬ್ಬರಾಗಿದ್ದು, 2016ನೇ ಫೋರ್ಬ್ಸ್ ಪಟ್ಟಿಯಲ್ಲಿ ಮೋದಿಯವರು 9ನೇ ಪ್ರಭಾವಿ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಅವರು ಅಗ್ರಸ್ಥಾನ ಪಡೆದುಕೊಂಡಿದ್ದಾರೆ.
74 ಮಂದಿ ವಿಶ್ವದ ಪ್ರಭಾವಿ ವ್ಯಕ್ತಿಗಳ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದ್ದು, 74 ಮಂದಿಗಳ ಪೈಕಿ ಟಾಪ್ 10 ಪಟ್ಟಿಯಲ್ಲಿ ಮೋದಿಯವರು 9ನೇ ಸ್ಥಾನ ಪಡೆದುಕೊಂಡಿದ್ದಾರೆ. ಮೊದಲನೇ ಸ್ಥಾನವನ್ನು ಪುಟಿನ್ ಅವರು ಪಡೆದುಕೊಂಡಿದ್ದರೆ, ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2ನೇ ಸ್ಥಾನದ ಪಡೆದುಕೊಂಡಿದ್ದಾರೆ.
ಮೂರನೇ ಸ್ಥಾನದಲ್ಲಿ ಜರ್ಮನಿಯ ಚಾನ್ಸ್ ಲರ್ ಏಂಜೀಲಾ ಮಾರ್ಕೆಲ್ ಪಡೆದುಕೊಂಡಿದ್ದಾರೆ. ಕಳೆದ ವರ್ಷದ 3ನೇ ಸ್ಥಾನ ಪಡೆದುಕೊಂಡಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಈ ಬಾರಿ 48ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಪ್ರಧಾನಿ ಮೋದಿಯವರು ವಿಶ್ವದ ಅತ್ಯಂತ ಪ್ರಭಾವಿ 10 ಜನರ ಪೈಕಿ ಮೋದಿ ಕೂಡ ಒಬ್ಬರಾಗಿದ್ದು, ಭಾರತದಲ್ಲಿ 1.3 ಬಿಲಿಯನ್ ಗೂ ಹೆಚ್ಚು ಜನರು ಮೋದಿಯವರನ್ನು ಇಷ್ಟಪಡುತ್ತಾರೆಂದು ಫೋರ್ಬ್ಸ್ ವರದಿ ಮಾಡಿದೆ.
ಬರಾಕ್ ಒಬಾಮಾ ಹಾಗೂ ಕ್ಸಿನ್ ಪಿಂಗ್ ಜೊತೆಗೆ ಇತ್ತೀಚೆಗಷ್ಟೇ ವಿದೇಶಗಳಿಗೆ ಭೇಟಿ ನೀಡಿದ ಸಂದರ್ಭಗಳಿಂದ ಮೋದಿಯವರು ಜಾಗತಿಕ ನಾಯಕರಾಗಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ಹವಾಮಾನ ಬದಲಾವಣೆ ಎದುರಿಸುವಲ್ಲಿ ಅಂತರಾಷ್ಟ್ರೀಯ ನಾಯಕರಲ್ಲಿ ಒಬ್ಬರಾಗಿದ್ದರು ಎಂದು ಫೋರ್ಬ್ಸ್ ಹೇಳಿಕೊಂಡಿದೆ.
Advertisement