
ನವದೆಹಲಿ: ಬುಲಂದ್ ಶಹರ್ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಮಾಜವಾದಿ ಪಕ್ಷದ ಸಚಿವ ಅಜಂ ಖಾನ್ ಅವರ ಕ್ಷಮಾಪಣೆಯನ್ನು ಸುಪ್ರೀಂ ಕೋರ್ಟ್ ಮಾನ್ಯಮಾಡಿದೆ.
ಬುಲಂದ್ ಶಹರ್ ಸಾಮೂಹಿಕ ಅತ್ಯಾಚಾರ ಪ್ರಕರಣ ರಾಜಕೀಯ ಪಿತೂರಿ ಎಂದು ಅಜಂ ಖಾನ್ ಆರೋಪಿಸಿದ್ದರು. ಇದಾದ ನಂತರ ತಮ್ಮ ಹೇಳಿಕೆಗ ಕ್ಷಮಾಪಣೆ ಕೇಳಬೇಕಂದು ಸುಪ್ರಿಂ ಕೋರ್ಟ್ ಆದೇಶಿಸಿತ್ತು, ಅದರಂತೆ ಅಜಂ ಖಾನ್ ಷರತ್ತು ರಹಿತ ಬೇಷರತ್ ಕ್ಷಮೆ ಕೋರಿದ್ದಾರೆ.
ನ್ಯಾ. ದೀಪಕ್ ಮಿಶ್ರಾ, ಅಮಿತವಾ ನೇತೃತ್ವದ ಸುಪ್ರೀಂಕೋರ್ಟ್ ಅಜಂ ಖಾನ್ ಕ್ಷಮಾಪಣೆಯನ್ನು ಮಾನ್ಯ ಮಾಡಿದೆ.
Advertisement