

ಪುಲ್ವಾಮಾ: ಜಮ್ಮು ಕಾಶ್ಮೀರದ ರತ್ನಿಪೋರದ ಬ್ಯಾಂಕ್ ವೊಂದರಿಂದ ಉಗ್ರರು 11 ಲಕ್ಷ ರು ದರೋಡೆ ಮಾಡಿದ್ದಾರೆ.
ಈ ಮುಂಚೆ ಅಂದರೆ ಡಿಸೆಂಬರ್ 8 ರಂದು ಪುಲ್ವಾಮಾದ ಬ್ಯಾಂಕ್ ವೊಂದರಿಂದ ಅಪರಿಚಿತ ದುಪ್ಕರ್ಮಿಗಳು, 13.38 ಲಕ್ಷ ಹಣ ದರೋಡೆ ಮಾಡಿದ್ದರು. ಕಳೆದ ಒಂದೂವರೆ ತಿಂಗಳಲ್ಲಿ ನಡೆದ ಎರಡನೇ ದರೋಡೆ ಪ್ರಕರಣ ಇದಾಗಿದೆ.
ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿ 500 ಹಾಗೂ 1000 ರು ನೋಟು ನಿಷೇಧಗೊಳಿಸಿದ ನಂತರ ಜಮ್ಮು ಕಾಶ್ಮೀರದ ವಿವಿಧ ಬ್ಯಾಂಕ್ ಗಳಲ್ಲಿ ಹಲವು ದರೋಡೆ ಪ್ರಕರಣ ಗಳು ನಡೆದಿವೆ.