ನೋಟು ನಿಷೇಧ ಎಫೆಕ್ಟ್: ಸಂಬಳ ನೀಡದ ಕಾರ್ಖಾನೆ ಮೇಲೆ ಕಾರ್ಮಿಕರಿಂದ ದಾಂಧಲೆ

0 ಹಾಗೂ 1000 ರು ಮುಖಬೆಲೆಯ ನೋಟು ನಿಷೇಧದ ನಂತರ ಕಂಪನಿಯೊಂದು ವೇತನ ನೀಡದ ಹಿನ್ನೆಲೆಯಲ್ಲಿ ಮೂವರು ಕಾರ್ಮಿಕರು ಕಾರ್ಖಾನೆ ಮೇಲೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಥಾಣೆ: 500 ಹಾಗೂ 1000 ರು ಮುಖಬೆಲೆಯ  ನೋಟು ನಿಷೇಧದ ನಂತರ ಕಂಪನಿಯೊಂದು ವೇತನ ನೀಡದ ಹಿನ್ನೆಲೆಯಲ್ಲಿ ಮೂವರು ಕಾರ್ಮಿಕರು ಕಾರ್ಖಾನೆ ಮೇಲೆ ದಾಂಧಲೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ವಾಘ್ಲೆ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯ ಕಿಟಕಿಗಳನ್ನು ನಿನ್ನೆ ಬೆಳಗ್ಗೆ ಧ್ವಂಸಗೊಳಿಸಿದ್ದಾರೆ ಹಾಗೂ ನಿರ್ಮಾಣ ಕಾಮಗಾರಿಗಾಗಿ ತಂದಿದ್ದ ಟೈಲ್ಸ್ ಗಳನ್ನ ಒಡೆದು ಹಾಕಿದ್ದಾರೆ  ಎಂದು ಮೂವರು ಕಾರ್ಮಿಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಘಟನಾವಳಿಗಳು ಕಾರ್ಖಾನೆಯ ಸಿಸಿಟಿವಿಯಲ್ಲಿ ದಾಖಲಾಗಿದ್ದು ಅದರ ಆಧಾರದ ಮೇಲೆ ವಾಗ್ಲೆ ಎಸ್ಟೇಟ್ ಪೊಲೀಸ್ ಠಾಣೆಯಲ್ಲಿ ವಿವಿಧ ಕಾಯ್ದೆಗಳಡಿ ಕೇಸು ದಾಖಲಿಸಲಾಗಿದೆ.

ಪ್ರತಿ ತಿಂಗಳ 10 ನೇ ತಾರೀಖಿನಂದು ಕಾರ್ಖಾನೆ ಕಾರ್ಮಿಕರಿಗೆ ವೇತನ ನೀಡುತ್ತಿತ್ತು. ಆದರೆ ಅನಾಣ್ಯೀಕರಣದ ಹಿನ್ನೆಲೆಯಲ್ಲಿ ಈ ತಿಂಗಳ ಸಂಬಳವನ್ನು ಇನ್ನು ಪಾವತಿಸಿರಲಿಲ್ಲ, ಈ ಹಿನ್ನೆಲೆಯಲ್ಲಿ ದಾಂಧಲೆ ನಡೆದಿದೆ ಎನ್ನಲಾಗಿದೆ. ಆದರೆ ಇದುವರೆಗೂ ಪೊಲೀಸರು ಯಾರೊಬ್ಬರನ್ನು ಬಂಧಿಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com