ಕಾಂಗ್ರೆಸ್ ಪಾಲಿಗೆ ದೇಶಕ್ಕಿಂತ ಪಕ್ಷ ದೊಡ್ಡದು, ನಮಗೆ ದೇಶವೇ ಸರ್ವೋಚ್ಛ: ಪ್ರಧಾನಿ ಮೋದಿ

ಬಿಜೆಪಿ ಸಂಸದೀಯ ಸಭೆ ಅಂತ್ಯಗೊಂಡಿದ್ದು, ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಿಡಿಕಾಡಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ...
ಬಿಜೆಪಿ ಸಂಸದೀಯ ಸಭೆ ಬಳಿಕ ಹೊರಬರುತ್ತಿರುವ ನಾಯಕರು
ಬಿಜೆಪಿ ಸಂಸದೀಯ ಸಭೆ ಬಳಿಕ ಹೊರಬರುತ್ತಿರುವ ನಾಯಕರು

ನವದೆಹಲಿ: ಬಿಜೆಪಿ ಸಂಸದೀಯ ಸಭೆ ಅಂತ್ಯಗೊಂಡಿದ್ದು, ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಿಡಿಕಾಡಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

ಕಾಂಗ್ರೆಸ್ ಗೆ ದೇಶಕ್ಕಿಂತ ತಮ್ಮ ಪಕ್ಷವೇ ದೊಡ್ಡದಾಗಿದ್ದು, ನಮಗೆ ದೇಶವೇ ಸರ್ವೋಚ್ಛವಾಗಿದೆ. ಈ ಹಿಂದೆ ವಿರೋಧ ಪಕ್ಷಗಳು 2ಜಿ ಹಗರಣ ಹಾಗೂ ಕಲ್ಲಿದ್ದಲು ಹಗರಣ ಕುರಿತು ಕೈಜೋಡಿಸಿ ಒಗ್ಗಟ್ಟಿನಿಂದ ಪ್ರತಿಭಟನೆ ನಡೆಸುತ್ತಿತ್ತು. ಇದೀಗ ಕಪ್ಪುಹಣದ ಪರವಾಗಿ ಒಗ್ಗಟ್ಟಿನಿಂದ ಪ್ರತಿಭಟನೆ ನಡೆಸುತ್ತಿವೆ. ಕಪ್ಪುಹಣವನ್ನು ನಿಯಂತ್ರಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.

ಸಭೆ ಬಳಿಕ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ವಿರುದ್ಧ ಮೋದಿಯವರು ಕಿಡಿಕಾರಿದ್ದಾರೆಂದು ಹೇಳಿದ್ದಾರೆ.

ಸೀಮಿತ ದಾಳಿ ಕುರಿತಂತೆ ಕಾಂಗ್ರೆಸ್ ಶಂಕೆ ವ್ಯಕ್ತಪಡಿಸುತ್ತಿರುವುದಕ್ಕೆ ಮೋದಿಯವರು ಕೆಂಡ ಕಾರಿದ್ದು, 1971ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಸೇನೆ ಕಾರ್ಯಾಚರಣೆಯನ್ನು ಯಾರೊಬ್ಬರು ಪ್ರಶ್ನೆ ಮಾಡಿರಲಿಲ್ಲ. ಆದರೆ, ಇಂದು ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ನಡೆಸಿದ ಸೀಮಿತ ದಾಳಿಗೆ ಸಾಕ್ಷ್ಯಾಧಾರಗಳನ್ನು ಕೇಳುತ್ತಿದ್ದಾರೆಂದು ಹೇಳಿದ್ದಾರೆಂದು ಅನಂತ್ ಕುಮಾರ್ ಹೇಳಿದ್ದಾರೆ.

ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರದ ವಿರುದ್ಧ ಯಾವುದೇ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ. ಇದೀಗ ಬಿಜೆಪಿ ಭ್ರಷ್ಟಾಚಾರ ನಿರ್ಮೂಲನೆಗೆ ಗಂಭೀರವಾದ ಕ್ರಮಗಳನ್ನು ಕೈಗೊಳ್ಳುತ್ತಿದ್ದರೆ, ವಿರೋಧ ವ್ಯಕ್ತಪಡಿಸುತ್ತಿದೆ. ಕಪ್ಪುಹಣ ಹಾಗೂ ಭ್ರಷ್ಟಾಚಾರಕ್ಕೆ ಬೆಂಬಲ ಸೂಚಿಸುವ ಬದಲಾಗಿದೆ ಸರ್ಕಾರವನ್ನೇ ಎತ್ತಿಕಟ್ಟುವ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅನಂತ್ ಕುಮಾರ್ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com