ತಿರುವನಂತಪುರಂ: ನಗರದ ಹೆಚ್ಚುವರಿ ಸೆಷನ್ಸ್ ಕೋರ್ಟ್ ಡಿವೈಎಫ್ಐ ಕಾರ್ಯಕರ್ತ ವಿಷ್ಣು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ 11 ಆರ್ಎಸ್ಎಸ್ ಕಾರ್ಯಕರ್ತರಿಗೆ ಸೋಮವಾರ ಡಬಲ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಅಲ್ಲದೆ ಓರ್ವ ಅಪರಾಧಿಗೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ 51 ಸಾವಿರ ರುಪಾಯಿ ದಂಡ ವಿಧಿಸಿದೆ.
ಕೈತಮುಕ್ಕುನ ಸಂತೋಷ್, ಮನೋಜ್ ಅಲಿಯಾಸ್ ಕಕ್ಕೋಟ್ ಮನೋಜ್ ಮತ್ತು ಬಿಜು ಕುಮಾರ್, ರಂಜಿತ್ ಕುಮಾರ್, ಬಾಲು ಮಹೇಂದರ್, ವಿಬಿನ್ ಮತ್ತು ಸತೀಶ್ ಕುಮಾರ್ ವಿನೋದ್ ಕುಮಾರ್, ಸತೀಶ್ ಸುಭಾಶ್ ಕೊಲೆ ಪ್ರಕರಣದ ಪ್ರಮುಖ ಅಪರಾಧಿಗಳಾಗಿದ್ದಾರೆ.
ಅಪರಾಧಿಗಳು ತಪ್ಪಿಸಿಕೊಳ್ಳಲು ಸಹಕರಿಸಿದ ಹರಿಲಾಲ್ ಗೆ ಕೋರ್ಟ್ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಡಿಸೆಂಬರ್ 16ರಂದು 16 ಮಂದಿ ತಪ್ಪಿತಸ್ಥರು ಎಂದು ತೀರ್ಪು ನೀಡಿದ್ದು, ಈ ಪೈಕಿ ಓರ್ವ ವಿಚಾರಣೆ ವೇಳೆ ಮೃತಪಟ್ಟಿದ್ದರೆ ಮತ್ತೊರ್ವ ಇನ್ನು ತಲೆರೆಮರೆಸಿಕೊಂಡಿದ್ದಾನೆ.
2008ರಲ್ಲಿ ಡಿವೈಎಫ್ಐ ಕಾರ್ಯಕರ್ತ ವಿಷ್ಣು ಅವರನ್ನು ಕೈತಮುಕ್ಕು ನ ಪಾಸ್ ಪೋರ್ಟ್ ಕಚೇರಿ ಬಳಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು.