ಜಯಲಲಿತಾ ಉತ್ತರಾಧಿಕಾರಿಯಾಗಿರುವ ಶಶಿಕಲಾ ಸಿಎಂ ಆಗಬೇಕು: ಕಂದಾಯ ಸಚಿವ

ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಏಕೈಕ ಉತ್ತರಾಧಿಕಾರಿಯಾಗಿರುವ ಶಶಿಕಲಾ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಸ್ಥಾನದ ಜೊತೆಗೆ, ಸಿಎಂ ಆಗಿ ಅಧಿಕಾರ....
ಜಯಲಲಿತಾ ಮತ್ತು ಶಶಿಕಲಾ
ಜಯಲಲಿತಾ ಮತ್ತು ಶಶಿಕಲಾ

ಚೆನ್ನೈ: ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಏಕೈಕ ಉತ್ತರಾಧಿಕಾರಿಯಾಗಿರುವ ಶಶಿಕಲಾ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಸ್ಥಾನದ ಜೊತೆಗೆ, ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳಬೇಕು ಎಂದು ತಮಿಳುನಾಡು ಕಂದಾಯ ಸಚಿವ ಆರ್ ಬಿ ಉದಯ್ ಕುಮಾರ್ ಒತ್ತಾಯಿಸಿದ್ದಾರೆ.

ಜಯಲಲಿತಾ ಅವರಿಗೆ ತುಂಬಾ ಬೇಕಾದವರಲ್ಲಿ ಶಶಿಕಲಾ ಒಬ್ಬರು, ಪಕ್ಷದ ಜವಾಬ್ದಾರಿ ಜೊತೆಗೆ ರಾಜ್ಯದ ಹಿತಾಸಕ್ತಿ ಕಾಪಾಡುವುದು ಕೂಡ ಮುಖ್ಯವಾಗಿದೆ, ಜಯಲಲಿತಾ ಅವರಂತೆ ಪಕ್ಷ ಮತ್ತು ರಾಜ್ಯದ ಚುಕ್ಕಾಣಿ ಹಿಡಿಯುವುದು ಶಶಿಕಲಾ ಅವರಿಗೆ ಮಾತ್ರ ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಸಚಿವರಾದ ಕದಂಬೂರ್ ರಾಜು ಮತ್ತು ಎಸ್ ರಾಮಚಂದ್ರನ್ ಹಲವು ಜಿಲ್ಲೆಗಳ ಎಐಎಡಿಎಂಕೆ ಅಧ್ಯಕ್ಷರು ಹಾಗೂ ಕಾರ್ಯಕರ್ತರನ್ನು ವಯಕ್ತಿಕವಾಗಿ ಭೇಟಿ ಮಾಡಿ ಅವರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಶಶಿಕಲಾ ಅವರೇ ಮುಂದಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಬೇಕು ಎಂಬುದು ಎಲ್ಲ ಕಾರ್ಯಕರ್ತರ ಒಮ್ಮತದ ಆಶಯವಾಗಿದೆ ಎಂದು ಉದಯ್ ಕುಮಾರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಶಶಿಕಲಾ ಅವರನ್ನು ಸಿಎಂ ಮಾಡುವ ಸಲುವಾಗಿ ಪನ್ನೀರ್ ಸೆಲ್ವಂ ವಿರುದ್ಧ ದಂಗೆ ಏಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪನ್ನೀರ್ ಸೆಲ್ವಂ ತುಂಬಾ ವಿದೇಯ ವ್ಯಕ್ತಿ, ನಾವೆಲ್ಲರೂ ಪಕ್ಷಕ್ಕೆ ನಿಷ್ಠರಾಗಿದ್ದೇವೆ, ಶಶಿಕಲಾ ಅವರೇ ಸಿಎಂ ಆಗಬೇಕು ಎಂಬುದು ಪನ್ನೀರ್ ಸೆಲ್ವಂ ಅವರ ಮನವಿಯಾಗಿದೆ ಎಂದು ಅವರು ತಿಳಿಸಿದ್ದಾರೆ. ದಶಕಗಳಿಂದ ಶಶಿಕಲಾ ಅವರು ಜಯಲಲಿತಾ ಅವರ ಜೊತೆಗಿದ್ದಾರೆ, ಶಶಿಕಲಾ ಅವರನ್ನು ಜಯಾ ಉತ್ತರಾಧಿಕಾರಿ ಎಂದು ಬಿಂಬಿಸಲಾಗಿದೆ. ಹೀಗಾಗಿ ಅವರೇ ತಮಿಳುನಾಡು ಸಿಎಂ ಆಗಬೇಕು ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com