ಗುಜರಾತ್: 26 ಪಾಕ್ ಮೀನುಗಾರರನ್ನು ಬಂಧಿಸಿ, 5 ದೋಣಿಗಳನ್ನು ವಶಪಡಿಸಿಕೊಂಡ ಕರಾವಳಿ ರಕ್ಷಣಾ ಪಡೆ

ಕರಾವಳಿ ರಕ್ಷಕ ಪಡೆ 26 ಮಂದಿ ಪಾಕಿಸ್ತಾನ ಮೀನುಗಾರರನ್ನು ಬಂಧಿಸಿ ಅವರ ಬಳಿಯಿದ್ದ 5 ದೋಣಿಗಳನ್ನು...
ಕರಾವಳಿ ರಕ್ಷಣಾ ಪಡೆಯಿಂದ ಬಂಧಿಸಲ್ಪಟ್ಟ ಪಾಕ್ ಮೀನುಗಾರರು
ಕರಾವಳಿ ರಕ್ಷಣಾ ಪಡೆಯಿಂದ ಬಂಧಿಸಲ್ಪಟ್ಟ ಪಾಕ್ ಮೀನುಗಾರರು
ಅಹಮದಾಬಾದ್: ಕರಾವಳಿ ರಕ್ಷಕ ಪಡೆ 26 ಮಂದಿ ಪಾಕಿಸ್ತಾನ ಮೀನುಗಾರರನ್ನು ಬಂಧಿಸಿ ಅವರ ಬಳಿಯಿದ್ದ 5 ದೋಣಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಮೀನುಗಾರರು ಭಾರತದ ಪ್ರಾಂತ್ಯದೊಳಗೆ ಬಂದು ಗುಜರಾತ್ ತೀರ ಭಾಗ ಕಚ್ ಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು.
ರಕ್ಷಣಾ ಸಾರ್ವಜನಿಕ ಸಂಪರ್ಕಾಧಿಕಾರಿ ಬಿಡುಗಡೆ ಮಾಡಿರುವ ಹೇಳಿಕೆ ಪ್ರಕಾರ, ಭಾರತದ ಪ್ರಾಂತ್ಯದೊಳಗೆ ಬಂದು ಮೀನು ಹಿಡಿಯಲು ಯತ್ನಿಸುತ್ತಿದ್ದ ಈ ಮೀನುಗಾರರನ್ನು ಬಂಧಿಸಿ ಅವರ ಬಳಿಯಿದ್ದ ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕರಾವಳಿ ರಕ್ಷಕ ಪಡೆಯ ಹಡಗು ಸಿ-419 ಪಾಕಿಸ್ತಾನದ ಮೀನುಗಾರರನ್ನು ಬಂಧಿಸಿ ದೋಣಿಗಳನ್ನು ವಶಪಡಿಸಿಕೊಂಡಿದೆ. ಇವರನ್ನು ಹೆಚ್ಚಿನ ವಿಚಾರಣೆಗೆ ಜಕೌ ಬಂದರಿಗೆ ಕರೆದೊಯ್ಯಲಾಗಿದೆ.
ಕಳೆದ ತಿಂಗಳು ಪಾಕಿಸ್ತಾನ 43 ಮಂದಿ ಭಾರತೀಯ ಮೀನುಗಾರರನ್ನು ಬಂಧಿಸಿತ್ತು. ಅರೇಬಿಯನ್ ಸಮುದ್ರ ತೀರದಲ್ಲಿ ಪಾಕಿಸ್ತಾನ ಪ್ರಾಂತ್ಯದೊಳಗೆ ಪ್ರವೇಶಿಸಿದ್ದಕ್ಕಾಗಿ ಮೀನುಗಾರರನ್ನು ಬಂಧಿಸಿತ್ತು. 
ಅರೇಬಿಯನ್ ಸಮುದ್ರ ತೀರದಲ್ಲಿ ಪ್ರಾಂತ್ಯದೊಳಗೆ ಪ್ರವೇಶಿಸಿ ನಿಯಮ ಉಲ್ಲಂಘಿಸುವುದಕ್ಕಾಗಿ ಪಾಕಿಸ್ತಾನ ಮತ್ತು ಭಾರತ ಪದೇ ಪದೇ ಮೀನುಗಾರರನ್ನು ಬಂಧಿಸುತ್ತಿರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com