ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಹೊಸ ಅಧಿಸೂಚನೆ ಹೊರಡಿಸಿರುವ ಆರ್ ಬಿಐ ಖಾತೆದಾರರು ತಮ್ಮ ಬಳಿ ಇರುವ 5 ಸಾವಿರಕ್ಕೂ ಹೆಚ್ಚು ಮೊತ್ತದ ಹಳೆಯ ನೋಟುಗಳನ್ನು ಡಿಸೆಂಬರ್ 30ರವರೆಗೂ ಒಂದು ಬಾರಿ ಮಾತ್ರ ಜಮಾ ಮಾಡಲು ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಆಮ್ ಆದ್ಮಿ ಪಕ್ಷ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಮೋದಿಯವರಲ್ಲಿ ಭಾರತಕ್ಕೆ ಸಿಕ್ಕಿದ್ದು ದುರ್ಬಲ ಪ್ರಧಾನಿ ಎಂದು ಟೀಕೆ ಮಾಡಿದೆ.