ದೇಶ
ಮೋದಿ ಸರ್ಕಾರ ಬ್ಯಾಂಕನ್ನು ತನಿಖಾ ಕಚೇರಿಯನ್ನಾಗಿ ಬದಲಾಯಿಸಿದೆ: ರಾಬರ್ಟ್ ವಾದ್ರಾ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ ಕೂಡ ನೋಟುಗಳ ನಿಷೇಧ...
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ ಕೂಡ ನೋಟುಗಳ ನಿಷೇಧ ಮತ್ತು ಠೇವಣಿಗಳ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚೆಗೆ ಹೊರಡಿಸಿರುವ ನಿರ್ಧಾರದ ವಿರುದ್ಧ ಹರಿಹಾಯ್ದಿದ್ದಾರೆ.
ಸರ್ಕಾರದ ಪ್ರತಿನಿಧಿಗಳ ಭ್ರಮೆ ಮತ್ತು ಹುಚ್ಚಾಟಗಳಿಗೆ ಜನರು ಕಷ್ಟ ಅನುಭವಿಸುತ್ತಿದ್ದಾರೆ. ಜನರು ಎದುರಿಸುತ್ತಿರುವ ನೋವು, ಸಮಸ್ಯೆಗಳನ್ನು ನೋಡಿದರೆ ದುಃಖವಾಗುತ್ತಿದೆ ಎಂದು ರಾಬರ್ಟ್ ವಾದ್ರಾ ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.
ಡಿಸೆಂಬರ್ 30ರವರೆಗೆ 5,000ಕ್ಕಿಂತ ಅಧಿಕ ಹಳೆಯ ನೋಟುಗಳನ್ನು ಬ್ಯಾಂಕಿನಲ್ಲಿ ಠೇವಣಿಯಿಡಬಹುದು ಎಂದು ನಿನ್ನೆ ಆರ್ ಬಿಐ ಹೊರಡಿಸಿರುವ ಆದೇಶ ಮತ್ತು ನೋಟುಗಳ ಅಪಮೌಲ್ಯದ ವಿರುದ್ಧ ಟೀಕಿಸಿದ ಅವರು, ಸರ್ಕಾರ ಬ್ಯಾಂಕುಗಳನ್ನು ತನಿಖಾ ಕಚೇರಿಗಳನ್ನಾಗಿ ಬದಲಾಯಿಸಿದೆ ಎಂದು ಅವರು ಆರೋಪಿಸಿದ್ದಾರೆ.