
ನವದೆಹಲಿ: ಪವಿತ್ರ ಯುದ್ಧದ ಹೆಸರಿನಲ್ಲಿ ಹಿಂದುತ್ವದ ವಿರುದ್ಧ ಭಾರತದಲ್ಲಿ ಸಮರ ಸಾರಿದ್ದ ಆಕ್ರಮಣಕಾರ 'ತೈಮೂರ್ ಅಲಿ' ಹೆಸರನ್ನು ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ದಂಪತಿ ತಮ್ಮ ಮಗುವಿಗೆ ಇಟ್ಟಿರುವುದಕ್ಕೆ ಇದೀಗ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿವೆ.
ತಮ್ಮ ಮಗುವಿಗೆ ಯಾವ ಹೆಸರಿಡಬೇಕೆಂಬುದು ಆ ಮಗುವಿನ ಪೋಷಕರ ಇಚ್ಚೆ ಹಾಗೂ ಹಕ್ಕು ಎಂದು ಹೇಳುತ್ತಿರುವ ಬಾಲಿವುಡ್ ಸ್ಟಾರ್ ಗಳು ಕರೀನಾ ಕಪೂರಾ ಹಾಗೂ ಸೈಫ್ ಅಲಿ ಅವರ ನಿರ್ಧಾರವನ್ನು ಒಂದೆಡೆ ಸ್ವಾಗತಿಸುತ್ತಿದ್ದರೆ, ಮತ್ತೊಂದೆಡೆ ಸಾರ್ವಜನಿಕ ವಲಯಗಳಲ್ಲಿ ಸಾಕಷ್ಟು ವಿರೋಧಗಳು ವ್ಯಕ್ತವಾಗತೊಡಗಿವೆ.
ಪಾಕಿಸ್ತಾನ ಮೂಲದ ಕೆನಡಾ ಲೇಖಕ ತಾರೇಕ್ ಫತಾ ಅವರು ತೈಮೂರ್ ಹೆಸರಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಟ್ವಿಟರ್ ನಲ್ಲಿ ಹೇಳಿಕೊಂಡಿರುವ ಅವರು, ಪವಿತ್ರ ಯುದ್ಧದ ಹೆಸರಿನಲ್ಲಿ ಅಸಂಖ್ಯ ಜನರನ್ನು ತೈಮೂರ್ ಹತ್ಯೆ ಮಾಡಿದ್ದ. ಇಂತಹ ವ್ಯಕ್ತಿಯ ಹೆಸರನ್ನು ಮಗುವಿಗೆ ಇಟ್ಟೀದ್ದೀರ. ನೀವು ಅನಕ್ಷರಸ್ಥರಾಗಿಬೇಕು ಇಲ್ಲವೇ ಸೊಕ್ಕಿನ ವ್ಯಕ್ತತ್ವ ಉಳ್ಳವರಾಗಿರಬೇಕು ಎಂದು ಕರೀನಾ ಕಪೂರ್ ಅವರಿಗೆ ಹೇಳಿದ್ದಾರೆ.
ಅಲ್ಲದೆ, ಕರೀನಾ ಅವರ ಮಗುವಿನ ಹೆಸರನ್ನು ಟ್ವಿಟರ್ ಬಹಿರಂಗ ಪಡಿಸಿದ್ದ ಕರಣ್ ಜೋಹರ್ ಅವರ ವಿರುದ್ಧವೂ ವಾಗ್ದಾಳಿ ನಡೆಸಿರುವ ಅವರು, ಹಿಂದುಗಳ ವಿರುದ್ಧ ಸಮರ ಸಾರಿ ನರಮೇಧ ನಡೆಸಿದ್ದ ವ್ಯಕ್ತಿಯ ಹೆಸರನ್ನು ಕರೀನಾ ಹಾಗೂ ಸೈಫ್ ಅಲಿ ತಮ್ಮ ಮಗುವಿಗೆ ಇಟ್ಟಿದ್ದಾರೆ. ಮಗುವಿಗೆ ತೈಮೂರ್ ಹೆಸರಿಟ್ಟಿರುವುದಕ್ಕೆ ನಿಮಗೆ ಸಂತೋಷವಾಗಿದೆ. ನನಗೇನಾಗಿದೆ ಕರಣ್ ಜೋಹರ್? ಎಂದು ಪ್ರಶ್ನಿಸಿದ್ದಾರೆ.
Advertisement