ಪೆಲೆಟ್ ಗನ್ ಗುಂಡಿಗೆ ಕಣ್ಣಿನ ದೃಷ್ಟಿ ಕಳೆದುಕೊಂಡ ಯುವಕ

ಕಿವಿ ಕೇಳದೆ, ಮಾತುಬಾರದಿದ್ದರೂ ಮನೆಯ ಜವಾಬ್ದಾರಿ ಹೊತ್ತುಕೊಂಡು ಜೀವನ ನಡೆಸುತ್ತಿದ್ದ ಯುವಕನೊಬ್ಬ ಇದೀಗ ಪೆಲೆಟ್ ಗನ್ ಗುಂಡಿನ ದಾಳಿಗೆ ಕಣ್ಣಿನ ದೃಷ್ಟಿಯನ್ನೂ ಕಳೆದುಕೊಂಡು ಸಂಕಷ್ಟದಲ್ಲಿರುವ ಪ್ರಕರಣವೊಂದು ಇದೀಗ ಬೆಳಕಿಗೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶ್ರೀನಗರ: ಕಿವಿ ಕೇಳದೆ, ಮಾತುಬಾರದಿದ್ದರೂ ಮನೆಯ ಜವಾಬ್ದಾರಿ ಹೊತ್ತುಕೊಂಡು ಜೀವನ ನಡೆಸುತ್ತಿದ್ದ ಯುವಕನೊಬ್ಬ ಇದೀಗ ಪೆಲೆಟ್ ಗನ್ ಗುಂಡಿನ ದಾಳಿಗೆ ಕಣ್ಣಿನ ದೃಷ್ಟಿಯನ್ನೂ ಕಳೆದುಕೊಂಡು ಸಂಕಷ್ಟದಲ್ಲಿರುವ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ.  

ಸೆಪ್ಟೆಂಬರ್ 13 ರಂದು ಕಾಶ್ಮೀರದಲ್ಲಿ ಮುಸ್ಲಿಮರ ಈದ್-ಉಲ್-ಅಝಾ ಹಬ್ಬವನ್ನು ಆಚರಿಸಲಾಗಿತ್ತು. ಹಬ್ಬದ ದಿನದಂದು ಘರ್ಷಣೆ ಏರ್ಪಟ್ಟಿದ್ದ ಕಾರಣ ಭದ್ರತಾ ಸಿಬ್ಬಂದಿಗಳು ಪೆಲೆಟ್ ಗನ್ ದಾಳಿ ನಡೆಸಿದ್ದರು. ಈ ವೇಳೆ ಸುಹೇಲ್ ಶಫೀ (21) ಗಂಭೀರವಾಗಿ ಗಾಯಗೊಂಡಿದ್ದ. ಅಲ್ಲದೆ. ಆತನ ಬಲಗಣ್ಣಿಗೆ ಗಾಯವಾಗಿತ್ತು. ಹುಟ್ಟುವಾಗಲೇ ಕಿವಿಡು ಹಾಗೂ ಮೂಗನಾಗಿ ಹುಟ್ಟಿದ್ದ ಸುಹೇಲ್'ಗೆ ಇದೀಗ ಕಣ್ಣಿನ ದೃಷ್ಟಿಯನ್ನು ಕಳೆದುಕೊಳ್ಳುವಂತಾಗಿದೆ.

ಹಬ್ಬದ ದಿನದಂದು ಸುಹೇಲ್ ತನ್ನ ಸಹೋದರನ್ನು ಕರೆಯಲೆಂದು ಹೊರ ಹೋಗಿದ್ದ. ಮನೆಗೆ ಬರುವಾಗ ಆತ ಗಂಭೀರವಾಗಿ ಗಾಯಗೊಂಡಿದ್ದ. ಬಲಗಣ್ಣಿಗೆ ತೀವ್ರವಾಗಿ ಗಾಯವಾಗಿತ್ತು ಎಂದು ಸುಹೇಲ್ ತಾಯಿ ಖಟಿಜಾ ಅವರು ಹೇಳಿದ್ದಾರೆ.

ಪೆಲೆಟ್ ಗನ್ ದಾಳಿಯಿಂದಾಗಿ ಸುಹೇಲ್ ನ ಬಲಗಣ್ಣು ತೀವ್ರವಾಗಿ ಗಾಯವಾಗಿದೆ. ಸಾಕಷ್ಟು ಶಸ್ತ್ರಚಿಕಿತ್ಸೆ ಬಳಿಕವೂ ಆತನಿಗೆ ದೃಷ್ಟಿ ಬರುತ್ತಿಲ್ಲ. ಈವರೆಗೂ ಸುಹೇಲ್ ಗೆ 3 ಶಸ್ತ್ರಚಿಕಿತ್ಸೆ ಗಳನ್ನು ನಡೆಸಲಾಗಿದೆ. ಶುಕ್ರವಾರ ಕೂಡ ಒಂದು ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿತ್ತು. ಆದರೆ, ಯಾವುದೇ ಸುಧಾರಣೆಗಳು ಕಂಡುಬಂದಿಲ್ಲ. ಬಲಗಣ್ಣಿನಿಂದ ನೋಡಲು ಆತನಿಗೆ ಸಾಧ್ಯವಾಗುತ್ತಿಲ್ಲ ಎಂದು ಖಟಿಜಾ ಅವರು ಹೇಳಿಕೊಂಡಿದ್ದಾರೆ.

ಅಂಗವೈಕಲ್ಯತೆ ಇದ್ದರೂ ಅದಾವುದಕ್ಕೂ ತಲೆಕೆಡಿಸಿಕೊಳ್ಳದೆ ಸುಹೇಲ್ ವಿಡಿಯೋ ಗ್ರಾಫರ್ ಆಗಿ, ಚಾಲಕನಾಗಿ ಹಾಗೂ ಮದುವೆ ಸಮಾರಂಭ, ಇನ್ನಿತರೆ ಸಮಾರಂಭಗಳಲ್ಲಿ ಅಲಂಕಾರ ಮಾಡುವ ಕೆಲಸಗಳನ್ನು ಮಾಡಿ ಮನೆಯನ್ನು ಸಂಭಾಲಿಸುತ್ತಿದ್ದ.

ತಿಂಗಳಿಗೆ ರು. 20,000ರಿಂದ 25,000ದ ವರೆಗೂ ಸಂಪಾದನೆ ಮಾಡುತ್ತಿದ್ದ. ಇದೀಗ ಮಗನಿಗೆ ಕಣ್ಣಿನ ದೃಷ್ಟಿ ಕೂಡ ಹೋಗಿದೆ. ಇದೀಗ ಆತ ಏನು ಮಾಡಬೇಕು?...ನಾವು ಬದುಕುವುದಾದರೂ ಹೇಗೆ?... ಮನೆಯಲ್ಲಿ ದುಡಿಯುವ ಕೈ ಯಾರಿಗೂ ಇಲ್ಲ, ಪ್ರತೀ ತಿಂಗಳು ಸುಹೇಲ್ ಗೆ ರು.15,000 ಕೇವಲ ಔಷಧಿಗಳಿಗೇ ಖರ್ಚಾಗುತ್ತಿದೆ. ಮಗನಿಗೆ ಮತ್ತೆ ಕಣ್ಣಿನ ದೃಷ್ಟಿ ಬರುವ ನಂಬಿಕೆಯಲ್ಲಿಯೇ ಬದುಕುತ್ತಿದ್ದೇವೆಂದು ಸುಹೇಲ್ ತಾಯಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com