'ಭವಿಷ್ಯದಲ್ಲಿ ದೇಶದಾದ್ಯಂತ ನಗದು ರಹಿತ ಅರ್ಥವ್ಯವಸ್ಥೆ': ಪ್ರಧಾನಿ ಮೋದಿ

ಪ್ರಸಕ್ತ ವರ್ಷ 2016ರ ಕೊನೆಯ 27ನೇ ಆವೃತ್ತಿಯ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ ಮಾತನಾಡುತ್ತಿದ್ದು, 2 ಹೊಸ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ...
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ

ನವದೆಹಲಿ: ಪ್ರಸಕ್ತ ವರ್ಷ 2016ರ ಕೊನೆಯ 27ನೇ ಆವೃತ್ತಿಯ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ ಮಾತನಾಡುತ್ತಿದ್ದು, 2 ಹೊಸ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.

ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ದೇಶದ ಜನತೆಗೆ ಕ್ರಿಸ್ ಮಸ್ ಶುಭಾಶಯಗಳನ್ನು ಕೋರಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯೇಸು ಕ್ರಿಸ್ತನನ್ನು ಕೊಂಡಾಡಿದ್ದಾರೆ. ಯೇಸುವಿನ ಸೇವೆ ಹಾಗೂ ಸಹಾನುಭೂತಿಯನ್ನು ಸ್ಮರಿಸುವ ದಿನ ಇದಾಗಿದೆ. ಯೇಸು ಕ್ರಿಸ್ತ ಕೇವಲ ಕೇವಲ ಬಡವರಿಗಷ್ಟೇ ಅಲ್ಲದೆ, ಬಡವರಿಗಾಗಿ ಸೇವೆ ಸಲ್ಲಿಸಿದವರನ್ನೂ ಪ್ರೋತ್ಸಾಹಿಸಿದ್ದಾರೆ. ನಿಜವಾದ ಸಬಲೀಕರಣವೆಂದರೆ ಇದು ಎಂದು ಹೇಳಿದ್ದಾರೆ.

ಇಂದು ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಹುಟ್ಟುಹಬ್ಬದ ದಿನವಾಗಿದ್ದು, ದೇಶಕ್ಕಾಗಿ ವಾಜಪೇಯಿಯವರು ನೀಡಿರುವ ಕೊಡುಗೆಯನ್ನು ಜನತೆ ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.

ತದನಂತರ ಎರಡು ಹೊಸ ಯೋಜನೆಗಳನ್ನು ಪ್ರಧಾನಿ ಮೋದಿಯವರು ಘೋಷಣೆ ಮಾಡಿದ್ದಾರೆ. 'ಧನ್ ವ್ಯಾಪಾರಿ", ಲಕ್ಕಿ ಗ್ರಾಹಕ ಎಂಬ ಹೊಸ ಯೋಜನೆಗಳನ್ನು ಮೋದಿಯವರು ಘೋಷಣೆ ಮಾಡಿದ್ದು, ಇ ಪೇಮೆಂಟ್ ಹೆಚ್ಚಿಸುವ ನಿಟ್ಟಿನಲ್ಲಿ ಯೋಜನೆ ಮೂಲಕ ಪ್ರತೀನಿತ್ಯ ಒಬ್ಬರಿ ರು.15,000 ಹಣವನ್ನು ಬಹುಮಾನವಾಗಿ ನೀಡಲಾಗುತ್ತದೆ. ಯೋಜನೆ ಬಡವರಿಗೆ ಲಾಭವಾಗಲಿದೆ. ರು.50 ರಿಂದ ರು.3,000 ರಷ್ಟು ಇ ಪೇಮೆಂಟ್ ಮೂಲಕ ವಹಿವಾಟು ನಡೆಸುವವರಿಗೆ ಬಹುಮಾನವನ್ನ ನೀಡಲಾಗುತ್ತದೆ. ಈ ಮೂಲಕ ಇ ಪೇಮೆಂಟ್ ಹೆಚ್ಚಳವಾಗಿಲಿದೆ. ಭವಿಷ್ಯದಲ್ಲಿ ದೇಶದಾದ್ಯಂತ ನಗದು ರಹಿತ ಅರ್ಥವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ ಎಂದಿದ್ದಾರೆ.

30 ಕೋಟಿಯಷ್ಟು ಭಾರತದಲ್ಲಿರುವ ಜನರು ರುಪೇ ಕಾರ್ಡ್ ಗಳನ್ನು ಬಳಕೆ ಮಾಡುತ್ತಿದ್ದಾರೆ. 30 ಕೋಟಿಯಲ್ಲಿ 20 ಕೋಟಿ ಜನರು ಬಡ ಕುಟುಂಬಸ್ಥರಾಗಿದ್ದಾರೆ. ಇದು ನನಗೆ ಸಾಕಷ್ಟು ಆಶ್ಚರ್ಯವನ್ನು ತಂದಿದೆ. ಹೀಗಾಗಿಯೇ ಗ್ರಾಹಕರಿಗೆ ಪ್ರೋತ್ಪಾಸ ನೀಡಲೆಂದೇ ಹೊಸ ಯೋಜನೆಗಳನ್ನು ಜಾರಿಗೆ ತರಲಾಗಿದೆ. ನಗದು ರಹಿತ ವಹಿವಾಟು ಶೇ.200ರಿಂದ 3000ರಷ್ಟು ಹೆಚ್ಚಳಗೊಂಡಿದೆ. ಆನ್ ಲೈನ್ ಕುರಿತ ಜಾಗೃತಿ ಹಾಗೂ ವಹಿವಾಟಿನಲ್ಲಿ ತಾಂತ್ರಿಕತೆ ಬಳಕೆ ಹೆಚ್ಚಳಗೊಂಡಿದೆ. ನಗದು ರಹಿತ ವಹಿವಾಟಿಗೆ ಅಸ್ಸಾಂ ಸರ್ಕಾರ ಪಡುತ್ತಿರುವ ಶ್ರಮವನ್ನು ಪ್ರಶಂಸಿಸಬೇಕಿದೆ. ಈ ಮೂಲಕ ಅಸ್ಸಾಂ ಸರ್ಕಾರಕ್ಕೆ ಶುಭಾಶಯಗಳನ್ನು ಕೋರುತ್ತಿದ್ದೇನೆ.

ಯುವಕರಿಗೆ ಹಾಗೂ ಸ್ಟಾರ್ಟ್ ಅಪ್ ಗಳಿಗೆ ಡಿಜಿಟಲೀಕರಣ ಚಿನ್ನದಂತಹ ಅವಕಾಶವಾಗಿದ್ದು, ಈ ಮೂಲಕ ಹೊಸ ಹೊಸ ಅವಕಾಶಗಳು ದೊರಕಲಿದೆ. ಕಳೆದ ಬಾರಿ ಸರ್ಕಾರದ ನಿರ್ಧಾರದ ಕುರಿತು ಜನರು ಸಾಕಷ್ಟು ಸಲಹೆ, ಅಭಿಪ್ರಾಯ ಹಾಗೂ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕೆಲವರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಇನ್ನೂ ಕೆಲವರು ಸರ್ಕಾರದ ನೋಟು ನಿಷೇಧವನ್ನು ಬೆಂಬಲಿಸಿದ್ದಾರೆ, ಮತ್ತೆ ಕೆಲವರು ಭ್ರಷ್ಟಾಚಾರದ ವಿರುದ್ಧ ಹೇಗೆ ಹೋರಾಟ ಮಾಡುತ್ತದೆ ಎಂದು ಪ್ರಶ್ನಿಸಿದ್ದಾರೆ.

ಕೆಲವರು ಜನರನ್ನು ತಪ್ಪಿ ಹಾದಿಗೆ ಕರೆತರುವ ಯತ್ನಗಳನ್ನು ಮಾಡುತ್ತಿದ್ದಾರೆ. ಸಾಕಷ್ಟು ಸಮಸ್ಯೆಗಳ ನಡುವೆಯೂ ಜನರು ಸರ್ಕಾರವನ್ನು ಬೆಂಬಲಿಸಿದ್ದಾರೆ. ಈ ಮೂಲಕ ದೇಶದ ಜನತೆಗೆ ಧನ್ಯವಾದ ಹೇಳುತ್ತಿದ್ದೇನೆ.

ಇದೇ ವೇಳೆ ವಿರೋಧ ಪಕ್ಷಗಳ ವಿರುದ್ದ ಕಿಡಿಕಾಡಿರುವ ಅವರು, ಸಂಸತ್ತು ಕಲಾಪಕ್ಕೆ ವಿರೋಧ ಪಕ್ಷಗಳು ಅಡ್ಡಿಪಡಿಸದಿದ್ದರೆ, ಚರ್ಚೆಗಳು ಫಲಪ್ರದಾಯಕವಾಗುತ್ತಿತ್ತು. ಯಾವುದೇ ವ್ಯಕ್ತಿಯಾಗಲೀ ಅಥವಾ ಯಾವುದೇ ರಾಜಕೀಯ ಪಕ್ಷವಾಗಲೀ ಕಾನೂನು ಎಲ್ಲರಿಗೂ ಒಂದೇ ಆಗಿದೆ. ಸಂಸತ್ತಿನಲ್ಲಿ ಎಷ್ಟೇ ಗದ್ದಲಗಳು ಉಂಟಾದರೂ ಕೆಲ ಉತ್ತಮ ಬೆಳವಣಿಗೆಗಳೂ ನಡೆದಿವೆ. ಅಂಗವೈಕಲ್ಯ ವ್ಯಕ್ತಿ ಕಾಯ್ದೆಗೆ ಅನುಮೋದನೆ ನೀಡಲಾಗಿದೆ. ಇದಕ್ಕಾಗಿ ರಾಜ್ಯಸಭೆ ಹಾಗೂ ಲೋಕಸಭೆಗೆ ಧನ್ಯವಾದ ಹೇಳಲು ಇಚ್ಛಿಸುತ್ತೇನೆ.

ಕೆಲಸ ನಿಯಮ ಬದಲಾವಣೆಗಳಿಗೆ ಸಾಕಷ್ಟು ಪ್ರಶ್ನೆಗಳು ಉದ್ಭವವಾಗಿದೆ. ಅಂತಹ ಪ್ರಶ್ನೆಗಳಿಗೆ ಮೂಲಕ ಉತ್ತರ ನೀಡುತ್ತಿದ್ದೇನೆ. ಭ್ರಷ್ಟಾಚಾರದ ವಿರುದ್ಧ ಹೋರಾಡಲು ನಾನು ನಿರ್ಧಾರ ಕೈಗೊಂಡಿದ್ದು, ಹೀಗಾಗಿಯೇ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ದೇಶದಾದ್ಯಂತ ಕಾಳಧನಿಕರನ್ನು ಬಹಿರಂಗೊಳ್ಳುತ್ತಿದ್ದಾರೆ. ಇದರ ರಹಸ್ಯ ಸಾಮಾನ್ಯ ಜನರೇ ಆಗಿದ್ದಾರೆ. ಸಾಮಾನ್ಯ ಜನರು ನೀಡುತ್ತಿರುವ ಮಾಹಿತಿಯಿಂದಲೇ ನಾವು ಕಪ್ಪುಹಣವನ್ನು ಬಹಿರಂಗಪಡಿಸುತ್ತಿದ್ದೇವೆಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಭ್ರಷ್ಟಾಚಾರ ಹಾಗೂ ಕಪ್ಪುಹಣದ ವಿರುದ್ಧ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದು, ಇದು ಕೇವಲ ಆರಂಭಿಕವಷ್ಟೇ, ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಕೇಂದ್ರ ನಿರ್ಧಾರಕ್ಕೆ ಜನತೆಯಿಂದ ಬೆಂಬಲಗಳು ವ್ಯಕ್ತವಾಗುತ್ತಿದ್ದು, ಜನರ ಬೆಂಬಲಕ್ಕೆ ಈ ಮೂಲಕ ಧನ್ಯವಾದ ಹೇಳುತ್ತಿದ್ದೇನೆ.

ರಾಜಕೀಯ ಪಕ್ಷಗಳಿಗೆ ಕೇಂದ್ರ ವಿನಾಯಿತಿ ನೀಡಿದೆ ಎಂದು ಕೆಲಸ ತಪ್ಪು ವದಂತಿಗಳನ್ನು ಹಬ್ಬಿಸಲಾಗುತ್ತಿದೆ. ಆದರೆ, ಕೇವಲ ವದಂತಿಯಷ್ಟೇ ಅಂತಹ ಯಾವುದೇ ವಿನಾಯಿತಿಯನ್ನು ಕೇಂದ್ರ ನೀಡಿಲ್ಲ ಎಂದಿದ್ದಾರೆ.

ಇದೇ ವೇಳೆ ಪ್ರಸಕ್ತ ವರ್ಷದಲ್ಲಿ ಭಾರತೀಯ ಕ್ರಿಕೆಟ್ ತಂಡ ನೀಡಿದ ಪ್ರದರ್ಶನಕ್ಕೆ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕ್ರೀಡಾಪಟುಗಳು ದೇಶದ ಹೆಮ್ಮೆಗೆ ಪಾತ್ರವಾಗಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಕರುಣ್ ನಾಯರ್ ಹಾಗೂ ಆರ್. ಅಶ್ವಿನ್ ಅವರು ಉತ್ತಮ ಸಾಧನೆಯನ್ನು ಮಾಡಿದ್ದಾರೆ. 15 ವರ್ಷಗಳ ಬಳಿಕ ಕಿರಿಯ ಹಾಕಿ ತಂಡ ವಿಶ್ವ ಕಪ್ ನ್ನು ಗೆದ್ದಿದೆ. ಯುವ ಆಟಗಾರರಿಗೆ ಈ ಮೂಲಕ ಶುಭಾಶಯ ಕೋರುತ್ತಿದ್ದೇನೆಂದು ತಿಳಿಸಿದ್ದಾರೆ.

ಮುಂದಿನ ವರ್ಷ 2017ರ ವರ್ಷ ಪ್ರತೀಯೊಬ್ಬರಿಗೂ ಸಂತೃಪ್ತಿ ನೀಡಲಿ ಎಂದಿರುವ ಮೋದಿಯವರು, ದೇಶದ ಪ್ರತೀಯೊಬ್ಬರಿಗೂ ಹೊಸ ವರ್ಷದ ಶುಭಾಶಯಗಳನ್ನು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com