ನವದೆಹಲಿ: ಲಂಚ ಪ್ರಕರಣದ ಸ್ಟಿಂಗ್ ಆಪರೇಷನ್ ನಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಹರೀಶ್ ರಾವತ್ ಸಿಬಿಐ ಮುಂದೆ ಹಾಜರಾಗುವುದಕ್ಕೆ ಉತ್ತರಾಖಂಡ ಹೈಕೋರ್ಟ್ ತಡೆ ನೀಡಿದೆ.
ಸಿಬಿಐ ಮುಂದೆ ಖುದ್ದು ಹಾಜರಾತಿಯಿಂದ ತಪ್ಪಿಸಿಕೊಳ್ಳುವುದಕ್ಕೆ ವಿನಾಯಿತಿ ನೀಡಬೇಕೆಂದು ಹರೀಶ್ ರಾವತ್ ನಿನ್ನೆ ಉತ್ತರಾಖಂಡ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದರು, ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಸಿಬಿಐ ಮುಂದೆ ಹಾಜರಾಗುವ ಅವಶ್ಯಕತೆ ಇಲ್ಲ ಎಂದು ಹೇಳಿ, ಪ್ರಕರಣವನ್ನು ಜನವರಿ 7ಕ್ಕೆ ವಿಚಾರಣೆ ಮುಂದೂಡಿದೆ.
ಹರೀಶ್ ರಾವತ್ ಸಿಬಿಐ ಅಧಿಕಾರಿಗಳ ಮುಂದೆ ಹಾಜರಾಗುವಂತೆ ಡಿಸೆಂಬರ್ 23 ರಂದು ಸಿಬಿಐ ಸಮನ್ಸ್ ನೀಡಿತ್ತು. ತಮಗೆ ವಿಧಾನಸಭೆಯಲ್ಲಿ ಬೆಂಬಲ ನೀಡುವಂತೆ ಸಿಎಂ ಹರೀಶ್ ರಾವತ್ ಕಾಂಗ್ರೆಸ್ ಶಾಸಕರಿಗೆ ಲಂಚದ ಆಮೀಷ ಒಡ್ಡಿದ್ದನ್ನು ಸ್ಟಿಂಗ್ ಆಪರೇಷನ್ ಮೂಲಕ ಬಯಲು ಮಾಡಲಾಗಿತ್ತು. ಈ ಸಂಬಂಧ ಏಪ್ರಿಲ್ 29 ರಂದು ಪ್ರಾಥಮಿಕ ತನಿಖೆ ನಡೆಸಿ, ಕೇಸು ದಾಖಲಿಸಿತ್ತು. ಆದರೆ ಈ ಆರೋಪವನ್ನು ಹರೀಶ್ ರಾವತ್ ತಳ್ಳಿ ಹಾಕಿದ್ದರು.
Advertisement