ಸಂಕ್ರಾಂತಿ ಅಲ್ಲ, ಇನ್ನುಂದೆ ಆಂಧ್ರ-ತೆಲಂಗಾಣದಲ್ಲಿ ಕೋಳಿ ಕಾಳಗ ನಡೆಯಲೇಬಾರದು: ಹೈಕೋರ್ಟ್

ಕೋಳಿ ಕಾಳಗಕ್ಕೆ ನಿಷೇಧವಿದ್ದರು ಸಂಕ್ರಾಂತಿ ಹಬ್ಬದಂದು ಅಕ್ರಮವಾಗಿ ನಡೆಯುವ ಕೋಳಿ ಕಾಳಗಗಳು ನಡೆಯದಂತೆ ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರ...
ಕೋಳಿ ಕಾಳಗ
ಕೋಳಿ ಕಾಳಗ
ಹೈದರಾಬಾದ್: ಕೋಳಿ ಕಾಳಗಕ್ಕೆ ನಿಷೇಧವಿದ್ದರು ಸಂಕ್ರಾಂತಿ ಹಬ್ಬದಂದು ಅಕ್ರಮವಾಗಿ ನಡೆಯುವ ಕೋಳಿ ಕಾಳಗಗಳು ನಡೆಯದಂತೆ ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ. 
ಆಂಧ್ರದಲ್ಲಿ ಕೋಳಿ ಜೂಜು ಅವ್ಯಾಹತವಾಗಿ ನಡೆಯುತ್ತಿದ್ದು ಇದನ್ನು ನಿರ್ಬಂಧಿಸಬೇಕು ಎಂದು ಪ್ರಾಣಿ ಕ್ಷೇಮಾಭಿವೃದ್ಧಿ ಮಂಡಲಿ, ಅಂತಾರಾಷ್ಟ್ರೀಯ/ಭಾರತ ಮಾನವ ಸಮಾಜ ಮತ್ತು ಹಲವು ಪ್ರಾಣಿ ದಯಾ ಸಂಘಗಳು ಸೇರಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದವು. ಇಂದು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಸಂಕ್ರಾಂತಿ ಹಬ್ಬವೇ ಅಲ್ಲ ಆಂಧ್ರ ಮತ್ತು ತೆಲಂಗಾಣದಲ್ಲಿ ಕೋಳಿ ಕಾಳಗವನ್ನು ಸಂಪೂರ್ಣವಾಗಿ ನಿಷೇಧಿಸಲು ಕ್ರಮಕೈಗೊಳ್ಳಬೇಕು ಎಂದು ಕೋರ್ಟ್ ಉಭಯ ರಾಜ್ಯಗಳಿಗೂ ಆದೇಶಿಸಿದೆ. 
ಹೈಕೋರ್ಟ್ ನ ನಿಷೇಧದ ತೀರ್ಪಿನ ನಡುವೆಯೂ ಜನವರಿ 14 ಸಂಕ್ರಾಂತಿ ಹಬ್ಬದಂದು ಕೋಳಿ ಕಾಳಗವನ್ನು ನಡೆಸಲಾಗುತ್ತಿದೆ ಎಂದು ಪ್ರಾಣಿ ಕ್ಷೇಮಾಭಿವೃದ್ಧಿ ಮಂಡಲಿಯ ಸದಸ್ಯ ಎನ್ ಜಿ ಜಯಸಿಂಹ ಅವರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com