ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡಲಿರುವ ಗೂಗಲ್ ಸಿಇಒ ಸುಂದರ್ ಪಿಚ್ಚೈ

ಜನವರಿಯಲ್ಲಿ ಗೂಗಲ್ ಸಂಸ್ಥೆಯ ಸಿಇಒ ಸುಂದರ್ ಪಿಚ್ಚೈ ಭಾರತಕ್ಕೆ ಭೇಟಿ ನೀಡಲಿದ್ದಾರೆ.
ಸುಂದರ್ ಪಿಚ್ಚೈ
ಸುಂದರ್ ಪಿಚ್ಚೈ
Updated on
ಕೋಲ್ಕತ್ತಾ: ಜನವರಿಯಲ್ಲಿ  ಗೂಗಲ್ ಸಂಸ್ಥೆಯ ಸಿಇಒ ಸುಂದರ್ ಪಿಚ್ಚೈ ಭಾರತಕ್ಕೆ ಭೇಟಿ ನೀಡಲಿದ್ದಾರೆ. 
ಐಐಟಿ ಖರಗ್ ಪುರದ ಹಳೆಯ ವಿದ್ಯಾರ್ಥಿಯಾಗಿರುವ ಗೂಗಲ್ ಸಿಇಒ ಸುಂದರ್ ಪಿಚ್ಚೈ ಭಾರತ ಭೇಟಿಯ ವೇಳೆ ಖರಗ್ ಪುರ ಐಐಟಿಗೂ ಭೇಟಿ ನೀಡಲಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.  ಜನವರಿ ಮೊದಲ ವಾರದಲ್ಲಿ ಖರಗ್ ಪುರ ಐಐಟಿಗೆ ಭೇಟಿ ನೀಡಲು ಸುಂದರ್ ಪಿಚ್ಚೈ ಅವರೇ ಸ್ವತಃ ಇಚ್ಛಿಸಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕ ಪಿಪಿ ಚಕ್ರವರ್ತಿ ಅಧಿಕೃತ ಮಾಹಿತಿ ನೀಡಿದ್ದಾರೆ. ಕಳೆದ ವರ್ಷ 2015 ರ ಡಿಸೆಂಬರ್ 15ರಂದೂ ಸುಂದರ್ ಪಿಚ್ಚೈ ಭಾರತಕ್ಕೆ ಭೇಟಿ ನೀಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com