ಚಿಟ್‌‌‌ ಫಂಡ್‌‌ ಹಗರಣ: ಸಿಬಿಐನಿಂದ ಟಿಎಂಸಿ ಸಂಸದ ತಪಸ್‌‌‌ ಪಾಲ್‌‌ ಬಂಧನ

7 ಸಾವಿರ ಕೋಟಿ ರುಪಾಯಿಯ ಪೊಂಜಿ ರೋಸ್ ವ್ಯಾಲಿ ಚಿಟ್‌ ಫಂಡ್‌ ಹಗರಣಕ್ಕೆ ಸಂಬಂಧಿಸಿದಂತೆ ನಟ ಹಾಗೂ ತೃಣಮೂಲ...
ಸಿಬಿಐ ಕಚೇರಿಯಿಂದ ಹೊರ ಬರುತ್ತಿರುವ ತಪಸ್ ಪಾಲ್ (ಬಲ ಚಿತ್ರ)
ಸಿಬಿಐ ಕಚೇರಿಯಿಂದ ಹೊರ ಬರುತ್ತಿರುವ ತಪಸ್ ಪಾಲ್ (ಬಲ ಚಿತ್ರ)
ಕೋಲ್ಕತಾ: 17 ಸಾವಿರ ಕೋಟಿ ರುಪಾಯಿಯ ಪೊಂಜಿ ರೋಸ್ ವ್ಯಾಲಿ ಚಿಟ್‌ ಫಂಡ್‌ ಹಗರಣಕ್ಕೆ ಸಂಬಂಧಿಸಿದಂತೆ ನಟ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದ ತಪಸ್ ಪಾಲ್ ಅವರನ್ನು ಶುಕ್ರವಾರ ಸಿಬಿಐ ಬಂಧಿಸಿದೆ.
ಚಿಂಟ್‌ ಫಂಡ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೇಂದ್ರೀಯ ತನಿಖಾ ಸಂಸ್ಥೆಯ ಮುಂದೆ ವಿಚಾರಣೆಗೆ ಹಾಜರಾಗಿದ್ದ ತಪಸ್ ಪಾಲ್ ಅವರು, ಭಿನ್ನವಾದ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ವಶಕ್ಕೆ ಪಡೆಯಲಾಗಿದೆ.
ಶಾರದ ಚಿಂಟ್ ಫಂಡ್ ಹಾಗೂ ರೋಸ್ ವ್ಯಾಲಿ ಚಿಂಟ್ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಸಂಸದ ತಪಸ್ ಪಾಲ್ ಹಾಗೂ ಮತ್ತೋರ್ವ ಸಂಸದನಿಗೆ ಡಿಸೆಂಬರ್‌ 30ರೊಳಗೆ ವಿಚಾರಣಗೆ ಹಾಜರಾಗುವಂತೆ ಸಿಬಿಐ ಸಮನ್ಸ್‌ ಜಾರಿ ಮಾಡಿತ್ತು. 
ಬೆಂಗಾಳಿ ನಟ ತಪಸ್ ಪಾಲ್ ಅವರು ಈ ಹಿಂದೆ ಪ್ರತಿಪಕ್ಷದ ಮಹಿಳಾ ಕಾರ್ಯಕರ್ತರನ್ನು ರೇಪ್ ಮಾಡಲು ತನ್ನ ಹುಡುಗರನ್ನು ಕಳುಹಿಸುವುದಾಗಿ ವಿವಾದಾತ್ಮ ಹೇಳಿಕೆ ನೀಡಿ ಸುದ್ದಿಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com