ಪ್ರಧಾನಿ ಮೋದಿಗೆ ಪತ್ರ ಬರೆದ 11 ವರ್ಷದ ಬಾಲಕ; ಮುಂದೇನಾಯ್ತು..?

ತನ್ನ ಶಾಲೆ ದೂರದಲ್ಲಿ ನಿತ್ಯ ನಡೆದುಕೊಂಡೇ ಹೋಗುವುದರಿಂದ ನಿತ್ಯ ತಡವಾಗುತ್ತಿದೆ ಇದಕ್ಕೆ ಪರಿಹಾರ ನೀಡಿ ಎಂದು 11 ವರ್ಷದ ಪುಟ್ಟ ಬಾಲಕನೊಬ್ಬ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವೊಂದನ್ನು ಬರೆದಿದ್ದಾನೆ...
ಪ್ರಧಾನಿಗೆ ಪತ್ರ ಬರೆದ 11 ವರ್ಷದ ಬಾಲಕ (ಸಾಂದರ್ಭಿಕ ಚಿತ್ರ)
ಪ್ರಧಾನಿಗೆ ಪತ್ರ ಬರೆದ 11 ವರ್ಷದ ಬಾಲಕ (ಸಾಂದರ್ಭಿಕ ಚಿತ್ರ)

ನವದೆಹಲಿ: ತನ್ನ ಶಾಲೆ ದೂರದಲ್ಲಿ ನಿತ್ಯ ನಡೆದುಕೊಂಡೇ ಹೋಗುವುದರಿಂದ ನಿತ್ಯ ತಡವಾಗುತ್ತಿದೆ ಇದಕ್ಕೆ ಪರಿಹಾರ ನೀಡಿ ಎಂದು 11 ವರ್ಷದ ಪುಟ್ಟ ಬಾಲಕನೊಬ್ಬ ಪ್ರಧಾನಿ ನರೇಂದ್ರ  ಮೋದಿ ಅವರಿಗೆ ಪತ್ರವೊಂದನ್ನು ಬರೆದಿದ್ದಾನೆ.

ದೂರುಗಳಿದ್ದರೆ ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆಯಿರಿ ಎಂದು ನರೇಂದ್ರ ಮೋದಿ ಅವರು ಹೇಳಿದ್ದೇ ತಡ, ದೆಹಲಿಯಲ್ಲಿರುವ ಪ್ರಧಾನಿ ಕಾರ್ಯಾಲಯಕ್ಕೆ ನಿತ್ಯ ಸಾವಿರಾರು ಪತ್ರಗಳು  ಬರುತ್ತಿವೆ.ಕೆಲವರು ಸರ್ಕಾರಕ್ಕೆ ಸಲಹೆಳನ್ನು ನೀಡಿದರು ಮತ್ತೆ ಕೆಲವರು ತಮಗಾಗುತ್ತಿರುವ ಸಮಸ್ಯೆಗಳ ಕುರಿತು ದೂರು ನೀಡುತ್ತಿದ್ದಾರೆ. ಇಂತಹುದೇ ಪತ್ರವೊಂದು ಇತ್ತೀಚೆಗೆ ಪ್ರಧಾನಿ  ಕಾರ್ಯಾಲಯ ತಲುಪಿದ್ದು, ಈ ಪತ್ರವನ್ನು ಕೇವಲ 11 ವರ್ಷದ ಪುಟ್ಟ ಬಾಲಕನೋರ್ವ ಬರೆದಿದ್ದಾನೆ ಎನ್ನುವುದೇ ಅಚ್ಚರಿಯ ಅಂಶ.

ಕಾನ್ಪುರದ ಉನ್ನಾವ್ ಪಟ್ಟಣದ ನಿವಾಸಿಯಾಗಿರುವ ನಯನ್ ಸಿಂಗ್ ಎಂಬ 7ನೇ ತರಗತಿಯ ಬಾಲಕ ಈ ಪತ್ರ ಬರೆದಿದ್ದು, ಮನೆಯಿಂದ ಶಾಲೆಗೆ ಸುಮಾರು 2 ಕಿ.ಮೀಗಳ ದೂರವಿದೆ. ಶಾಲೆಗೆ  ತೆರಳಲು ಯಾವುದೇ ರೀತಿಯ ವಾಹನ ವ್ಯವಸ್ಥೆಗಳಿಲ್ಲ. ಹೀಗಾಗಿ ನಿತ್ಯವೂ ನಾನೂ ಸೇರಿದಂತೆ ಸುಮಾರು 200 ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲೇ ಶಾಲೆಗೆ ಹೋಗುತ್ತಿದ್ದೇವೆ. ಹೀಗಾಗಿ ನಮ್ಮ   ಸಮಸ್ಯೆಗೆ ಪರಿಹಾರ ನೀಡಿ ಎಂದು ಮನವಿ ಮಾಡಿಕೊಂಡಿದ್ದಾನೆ.

ನಯನ್ ಸಿಂಗ್ ಚಂದ್ರಶೇಖರ್ ಅಜಾದ್ ಇಂಟರ್ ಮೀಡಿಯಟ್ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಪುಟ್ಟ  ಬಾಲಕ ಪತ್ರಬರೆದಿದ್ದನು. ಆಶ್ಚರ್ಯಕರ ವಿಚಾರವೆಂದರೆ ಈತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರಬರೆದಿರುವ ವಿಚಾರ ಸ್ವತಃ ಆ ಬಾಲಕನ ತಂದೆ-ತಾಯಿಯವರಿಗೇ ತಿಳಿದಿರಲಿಲ್ಲ.  ಬಾಲಕ ಪತ್ರ ಬರೆದ ಕೆಲವೇ ವಾರಗಳಲ್ಲಿ ಮನೆಗೆ ಸ್ಥಳೀಯ ರೈಲ್ವೇ ಅಧಿಕಾರಿಗಳಿಂದ ಪತ್ರ ಬಂದಾಗಲೇ ಪತ್ರ ಪ್ರಕರಣ ಪೋಷಕರ ಗಮನಕ್ಕೆ ಬಂದಿದೆ.

ಪತ್ರದಲ್ಲಿ ರೈಲ್ವೇ ಅಧಿಕಾರಿಗಳು, ತಮ್ಮ ಮನವಿಯನ್ನು ಪ್ರಧಾನ ಮಂತ್ರಿಗಳಿಗೆ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಬಾಲಕ ನಯನ್ ಸಿಂಗ್ ಪತ್ರದಲ್ಲಿ ಉಲ್ಲೇಖಿಸಿರುವ ಸ್ಥಳದಲ್ಲಿ  ರೈಲ್ವೇ ಕ್ರಾಸಿಂಗ್ ಅಥವಾ ಮೇಲ್ಸೇತುವೆ ನಿರ್ಮಿಸಲು ರಾಜ್ಯ ಸರ್ಕಾರ ರೈಲ್ವೇ ಸಚಿವಾಲಯವನ್ನು ಸಂಪರ್ಕಿಸದ ಹೊರತು ಕಾಮಗಾರಿ ಸಾಧ್ಯವಿಲ್ಲ. ಇದಕ್ಕೆ ರಾಜ್ಯ ಸರ್ಕಾರದ ನೆರವು ಬೇಕಿದೆ  ಎಂದು ಅಧಿಕಾರಿಗಳು ತಮ್ಮ ಅಸಾಹಯಕತೆಯನ್ನು ತೋರಿಸಿದ್ದಾರೆ. ಅಲ್ಲದೆ ರಾಜ್ಯ ಸರ್ಕಾರ ಮುಂದೆ ಬಂದರೆ ಖಂಡಿತಾ ಈ ಸಮಸ್ಯೆಯನ್ನು ಪರಿಹರಿಸುವುದಾಗಿ ರೈಲ್ವೇ ಅಧಿಕಾರಿಗಳು  ಭರವಸೆ ನೀಡಿದ್ದಾರೆ.

ಮಧ್ಯ ಪ್ರವೇಶಿಸಿದ ಪ್ರಧಾನಿ
ಇನ್ನು ಬಾಲಕನ ಪತ್ರ ಪ್ರಧಾನಿ ಕಾರ್ಯಲಯಕ್ಕೆ ತಲುಪುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರಿಂದಲೂ ಅತಿ ಶೀಘ್ರದಲ್ಲಿ ಸಮಸ್ಯೆ ಈಡೇರಿಸುವ ಕುರಿತು ಭರವಸೆ ದೊರೆತಿದೆ. ಜಪಾನ್  ನಲ್ಲಿ ಕೇವಲ ಓರ್ವ ವಿದ್ಯಾರ್ಥಿನಿಗಾಗಿಯೇ ಒಂದು ಇಡೀ ರೈಲು ಓಡಾಡುತ್ತಿರುವಾಗ ನೂರಾರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಮ್ಮ ಸರ್ಕಾರ ಇಷ್ಟೂ ಮಾಡದಿದ್ದರೆ ಹೇಗೆ..!

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com