ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನಕಲಿ ನೋಟ್ ಕಳ್ಳಸಾಗಣೆ ಆರೋಪದ ಮೇಲೆ ಜೆಟ್ ಏರ್ ವೇಸ್ ಸಿಬ್ಬಂದಿ ಬಂಧನ

ಮುಂಬೈ ಪೊಲೀಸರು ಭಾರಿ ವಿದೇಶಿ ಕರೆನ್ಸಿಯೊಂದಿಗೆ ಜೆಟ್ ಏರ್ ವೇಸ್ ಸಿಬ್ಬಂದಿಯೊಬ್ಬರನ್ನು ಛತ್ರಪತಿ ಶಿವಾಜಿ...
Published on
ಮುಂಬೈ: ಮುಂಬೈ ಪೊಲೀಸರು ಭಾರಿ ವಿದೇಶಿ ಕರೆನ್ಸಿಯೊಂದಿಗೆ ಜೆಟ್ ಏರ್ ವೇಸ್ ಸಿಬ್ಬಂದಿಯೊಬ್ಬರನ್ನು ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಹಾಂಗ್ ಕಾಂಗ್ ಗೆ ತೆರಳಲು ಸಿದ್ಧತೆ ನಡೆಸಿದ್ದ ಜೇಟ್ ಏರ್ ವೇಸ್ ಸಿಬ್ಬಂದಿ ಅಗರ್ ರಿಸ್ಲೆಯಿ ನಕಲಿ ನೋಟು ಕಳ್ಳಸಾಗಣೆ ಮಾಡುತ್ತಿದ್ದ ಅನುಮಾನದ ಮೇಲೆ ಬಂಧಿಸಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಏರ್ ವೇಸ್, ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಟ್ ಏರ್ ವೇಸ್ ಅಧಿಕಾರಿಗಳ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡಲಿದೆ. ಜೆಟ್ ಏರ್ ವೇಸ್ ಸಿಬ್ಬಂದಿ ವಿಚಾರಣದಲ್ಲಿ ಸಂಪೂರ್ಣ ಪಾರದರ್ಶಕವಾಗಿದೆ ಎಂದು ಹೇಳಿದೆ.
ಇದು ಉದ್ಯೋಗಿಯ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದ್ದು, ಕಂಪನಿ ನೀತಿ ಮತ್ತು ಕಾರ್ಯವಿಧಾನಗಳು ಅನುಸಾರವಾಗಿ ಅಗತ್ಯ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com