
ಅಸ್ಸಾಂ: ಅಸ್ಸಾಂ ಗೆ ಹೊಸ ಅಭಿವೃದ್ಧಿ ಮಾದರಿಯ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಸ್ಸಾಂ ಗೆ ಭೇಟಿ ನೀಡಿ ಬ್ರಹ್ಮಪುತ್ರ ಕ್ರ್ಯಾಕರ್ ಪಾಲಿಮರ್ ಲಿಮಿಟೆಡ್ ಹಾಗೂ ನುಮಾಲಿಘರ್ ರಿಫೈನರಿ ಲಿಮಿಟೆಡ್ ನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಮೋದಿ, ಆಕ್ಟ್ ಈಸ್ಟ್ ಪಾಲಿಸಿಯ ಜೊತೆಗೆ ಈಶಾನ್ಯ ರಾಜ್ಯಗಳಲ್ಲಿ ಸಾಮೂಹಿಕ ಶಕ್ತಿಯನ್ನು ಹೆಚ್ಚಿಸಲು ಅಸ್ಸಾಂ ಗೆ ಹೊಸ ಅಭಿವೃದ್ಧಿ ಮಾದರಿಯ ಅಗತ್ಯವಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಈಶಾನ್ಯ ರಾಜ್ಯಗಳ ಅಭಿವೃದ್ಧಿ ಕೇಂದ್ರ ಸರ್ಕಾರದ ಆದ್ಯತೆಯ ವಿಷಯವಾಗಿದೆ, ದೇಶದ ಪಶ್ಚಿಮ ಭಾಗಗಳು ಅಭಿವೃದ್ಧಿಯಾಗುತ್ತಿದ್ದರೆ ಈಶಾನ್ಯ ಭಾಗಗಳು ಅಭಿವೃದ್ಧಿಯಾಗದೇ ಉಳಿಯಲು ಸಾಧ್ಯವಿಲ್ಲ. ದೇಶದ ಸಮಗ್ರ ಅಭಿವೃದ್ಧಿ ಮಾತ್ರ ಅಭಿವೃದ್ಧಿ ಎನಿಸಿಕೊಳ್ಳುತ್ತದೆ ಎಂದು ಮೋದಿ ತಿಳಿಸಿದ್ದಾರೆ. ಅಸ್ಸಾಂ ನಲ್ಲಿ ಉದ್ಘಾಟನೆಯಾದ ಯೋಜನೆಗಳು ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಲಿದ್ದು ಇದರಿಂದಾಗಿ ದೇಶ/ ರಾಜ್ಯದ ಜನತೆ ಸಂತಸಗೊಳ್ಳಲಿದ್ದಾರೆ ಎಂದು ಮೋದಿ ಹೇಳಿದ್ದಾರೆ.
Advertisement